25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ಈ “ದಸ್ಕತ್”ಡಿಸೆಂಬರ್ 13 ರಂದು ಬಿಡುಗಡೆ,

ಬೆಳ್ತಂಗಡಿ: ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗದಲ್ಲಿಯೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದು, ಇದೀಗ ಬಹುನೀರೀಕ್ಷಿತ ದಸ್ಕತ್ ತುಳು ಚಿತ್ರ ತೆರೆಕಾಣಲು ಸಜ್ಜಾಗುತ್ತಿದೆ.ಬೆಳ್ತಂಗಡಿಯ ಯುವಕರು ಸೇರಿ ಮಾಡಿದ ದಸ್ಕತ್ ಚಿತ್ರ ಡಿಸೆಂಬರ್ 13ರಂದು ಏಕಕಾಲದಲ್ಲಿ ಸುಮಾರು 15 ಸಿನಿಮಾ ಟಾಕೀಸ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ ಅನೀಶ್ ಪೂಜಾರಿ ವೇಣೂರು ಹೇಳಿದರು.

ಅವರು ಡಿ.6ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ಈ ದಸ್ಕತ್. ಬೆಳ್ತಂಗಡಿ ತಾಲೂಕಿನ ವೇಣೂರು ನಾರಾವಿ,ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.ಪ್ರಕೃತಿಯ ಸೊಗಡು,ಕಲೆ,ಸಂಸ್ಕೃತಿಗಳನ್ನು ಬಿಂಬಿಸುವ ಸಮಾಜಕ್ಕೆ ಸಂದೇಶ ನೀಡುವ ಚಿತ್ರ ಇದಾಗಿದೆ.ಚಿತ್ರದಲ್ಲಿ ಹೆಚ್ಚಾಗಿ ನಮ್ಮ ಬೆಳ್ತಂಗಡಿ ತಾಲೂಕಿನ ಶೆ.75% ಅದ್ಬುತ ಕಲಾವಿದರು ಬಣ್ಣ ಹಚ್ಚಿದ್ದಾರೆ.‌ಸಿನೆಮಾ,ರಂಗಭೂಮಿ ಕಲಾವಿದರು ಇದ್ದಾರೆ ಎಂದರು. ಒರ್ವ ವ್ಯಕ್ತಿಯ ಪ್ರತಿ ಭಾವನೆಯನ್ನು ತೋರಿಸುವ ಚಿತ್ರವೇ ದಸ್ಕತ್,ಮನ ಇಂಪಾಗಿಸುವ ಅದ್ಬುತವಾದ ಮೂರು ಹಾಡುಗಳಿವೆ. ಎರಡು ಗಂಟೆಯ ದಸ್ಕತ್ ಚಿತ್ರವನ್ನು ತುಳುನಾಡಿನ ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಬಂದು ಸಿನೆಮಾ ವೀಕ್ಷಿಸಿ ಗೆಲ್ಲಿಸಿಕೊಡಬೇಕೆಂದರು. ದಸ್ಕತ್” ತುಳು ಚಲನಚಿತ್ರ ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ, ಸವೆಂಟಿ ಸೆವೆನ್ ಸ್ಪೂಡಿಯೋಸ್ ರಾಘವೇಂದ್ರ ಕುಡ್ವ ರವರ ನಿರ್ಮಾಣದ, ಈ ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯ ನಿರ್ವಹಿದ್ದಾರೆ.ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣದ ದಸ್ಕತ್ ಚಿತ್ರಕ್ಕೆ ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ಅಲ್ಲದೇ ಚಿತ್ರಕ್ಕೆ ಸಮರ್ಥನ್ ಎಸ್.ರಾವ್ ಅವರ ಸಂಗೀತವಿದೆ. ದಸ್ಕತ್ ಚಿತ್ರದಲ್ಲಿ ನಾಯಕಿಯಾಗಿ ನೀನಾದೇ ನಾ ಧಾರಾವಾಹಿ ಖ್ಯಾತಿಯ ಭವ್ಯ ಪೂಜಾರಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ ದೀಕ್ಷಿತ್ ಕೆ ಅಂಡಿಂಜೆ , ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ ,ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ, ಚೇತನ್ ಪಿಲಾರ್,ಭಗವಾನ್,ಮಂಜುಳಾ, ನವೀನ್ ಬೊಂದೆಲ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.ಚಲನಚಿತ್ರವು ಬೋಧಿ ಪ್ರೋಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ. ತಂಡದಲ್ಲಿ ಸ್ಮಿತೇಶ್‌ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಸ್ಕತ್ ತಂಡದ ಸ್ಮಿತೇಶ್ ಬಾರ್ಯ,ವಿನೋದ್ ರಾಜ್ ಕಲ್ಮಂಜ,ನಿಶಿತ್ ಶೆಟ್ಟಿ, ಸಮರ್ಥನ್ ಎಸ್ ರಾವ್,ಸಂತೋಷ್ ಆಚಾರ್ಯ ಗುಂಪಲಾಜೆ ಉಪಸ್ಥಿತರಿದ್ದರು.

Related posts

ಕುಕ್ಕೇಡಿ ಉಳ್ತೂರು ಬಳಿಯ ಕಡ್ತ್ಯಾರ್ ಎಂಬಲ್ಲಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ದುರಂತದಲ್ಲಿ ಚಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟ ದೇಹಗಳು – ಮೂವರು ಸಾವು : ಹಲವರಿಗೆ ಗಂಭೀರ ಗಾಯ

Suddi Udaya

ಗುಂಡೂರಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

“ನಾನು ರಾಜಕೀಯ ನಿವೃತ್ತಿ ನೀಡಿಲ್ಲ,: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಂದ ಸ್ಪಷ್ಟನೆ

Suddi Udaya

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಮಹಾಸಭೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ