24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

ಉಜಿರೆ: ವಿಶ್ವ ಏಡ್ಸ್ ದಿನ ಅಂಗವಾಗಿ ಇಲ್ಲಿನ ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಡಿ. 3 ರಂದು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಸುಜಾತ ಅವರು, ಏಡ್ಸ್ ಹರಡುವ ವಿಧಾನ, ತಡೆಗಟ್ಟುವಿಕೆ, ರಕ್ತದಾನ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಇತ್ಯಾದಿ ವಿಚಾರ ಕುರಿತು ಮಾತನಾಡಿದರು.

ಸರ್ಕಾರಗಳು ಕಳೆದ ಇಪ್ಪತ್ತು ವರ್ಷಗಳಿಂದ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಪರಿಣಾಮ ಏಡ್ಸ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷ ಕಡಿಮೆಯಾಗುತ್ತಾ ಬಂದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ದಿವ್ಯಾ ಉಪಸ್ಥಿತರಿದ್ದರು.

ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

Suddi Udaya

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

Suddi Udaya

ಶಿಶಿಲ: ಸರಕಾರಿ ಮೀಸಲು ಅರಣ್ಯದಿಂದ ಮರಕಳ್ಳತನ ಪ್ರಕರಣ : ಓರ್ವನ ಬಂಧನ

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಬೆಳ್ತಂಗಡಿ : ಶ್ರೀಮತಿ ಆಲಿಸ್ ಪಿರೇರಾ ನಿಧನ

Suddi Udaya

ನವಕಾರ್ ಮಹಾಮಂತ್ರ ದಿವಸ್ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಾಗಿ

Suddi Udaya
error: Content is protected !!