ಕಕ್ಕಿಂಜೆ: ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಇದರ ಉದ್ಘಾಟನಾ ಸಮಾರಂಭವು ಡಿ.7 ರಂದು ನಡೆಯಿತು.
ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರವನ್ನು ಬೆಂಗಳೂರಿನ ಅದಮ್ಯ ಚೇತನ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಡಾ.ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸಿ ಮಾತನಾಡಿ ಆರೋಗ್ಯ, ಜನ ಜೀವನ, ಪರಿಸರ ಇದರ ಬಗ್ಗೆ ಗಮನ ಹರಿಸಬೇಕು.ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ರೂಢಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಆಸ್ಪತ್ರೆ,ಕೇಂದ್ರಗಳು ದೇಶದ ಗ್ರಾಮಗಳಿಗೆ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ವಿಧಾನ ಪರಿಷತ್ ನ ಉಪ ಸಭಾಪತಿ ಎಂ ಕೆ ಪ್ರಾಣೇಶ್ ವಹಿಸಿ ಮಾತನಾಡಿ ತಾನು ಹುಟ್ಟಿದ ಊರಿನ ಋಣ ತೀರಿಸುವ ಕೆಲಸವನ್ನು ಡಾ. ಮುರಳಿಕೃಷ್ಣ ಮಾಡಿದ್ದಾರೆ ಅವರ ಕೆಲಸ ಶ್ಲಾಘನೀಯವಾದುದು ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಹರೀಶ್ ಕುಮಾರ್, ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ರೀಜನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಗೀರ್ ಸಿದ್ದಿಕಿ, ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿನ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್,ಧರ್ಮಸ್ಥಳ ದೇಗುಲದ ವಸಂತನೆಗಾರ, ಎಸ್ ಕೆ ಆರ್ ಡಿ ಪಿ ಧರ್ಮಸ್ಥಳ ವಿಮಾ ವಿಭಾಗ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಾರದಾ, ಹಾಗೂ ಸೈಂಟ್ ಥಾಮಸ್ ಪ್ರೌಢ ಶಾಲೆ, ನೆರಿಯ ಇಲ್ಲಿನ ಮುಖ್ಯ ಶಿಕ್ಷಕಿ ತ್ರೇಸಿಯಾ ಕೆ.ಪಿ.ಉಪಸ್ಥಿತರಿದ್ದರು.
ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ವಂದನಾ ಎಂ ಇರ್ವತ್ರಾಯ, ಕೆಎಂಸಿ ಜನಸಂಪರ್ಕಧಿಕಾರಿ ರಾಕೇಶ್, ಹಾಗೂ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನಿರ್ದೇಶಕರು, ವೈದ್ಯರು, ಸಿಬ್ಬಂದಿಗಳು, ಉಪಸ್ಥಿತರಿದ್ದರು.
ಗುರುಪ್ರಸಾದ್ ಹಾಗೂ ಡಾ. ವಿಧಿಶ್ರೀ ಕಾರ್ಯಕ್ರಮ ನಿರೂಪಿಸಿದರು.ವೈದ್ಯಧಿಕಾರಿ ಗ್ರೀಷ್ಮಾ ಪ್ರಾರ್ಥನೆ ಹಾಡಿದರು.