33 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಇಂದಬೆಟ್ಟು, ನಾವೂರು, ಕನ್ಯಾಡಿ, ಮಲವಂತಿಗೆ, ಮಿತ್ತಬಾಗಿಲು ಮತ್ತು ಕಡಿರುದ್ಯಾವರ ಗ್ರಾಮಗಳ ಸಹಕಾರವ್ಯಾಪ್ತಿಗೆ ಒಳಪಟ್ಟ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಬಂಗಾಡಿಯ ಮುಂದಿನ 5ವರ್ಷದ ಅವಧಿಯ ಆಡಳಿತ ಮಂಡಳಿಗೆ ಡಿ.8ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತೀಯ (ಬಿಜೆಪಿ) ಎಲ್ಲಾ ಅಭ್ಯರ್ಥಿಗಳು ಭಾರಿ ಮತಗಳ ಅಂತರದಲ್ಲಿ ವಿಜಯಿಶಾಲಿಯಾಗಿದ್ದಾರೆ.

ಅಭ್ಯರ್ಥಿಗಳಾದ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಗೌಡ, ವಸಂತ ಗೌಡ, ಹರೀಶ್ ಸಾಲಿಯಾನ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್ ಕಣದಲ್ಲಿ ಸ್ಪರ್ಧಿಸಿ ವಿಜಯಶಾಲಿಗಳಾಗಿದ್ದಾರೆ.

ಸಾಲಗಾರ ಹಿಂದುಳಿದ ವರ್ಗ ‘ಎ’ ಕ್ಷೇತ್ರ ದಿಂದ ರಮೇಶ್ ಕೆಂಗಾಜೆ, ಸಾಲಗಾರ ಹಿಂದುಳಿದ ವರ್ಗ ‘ಬಿ’ ಕ್ಷೇತ್ರ ದಿಂದ ಶೀನಪ್ಪ ಗೌಡ, ಸಾಲಗಾರ ಮಹಿಳಾ ಕ್ಷೇತ್ರ ದಿಂದ ಪುಷ್ಪಲತಾ.ಕೆ, ವೇದಾವತಿ, ಸಾಲಗಾರ ಪ.ಜಾತಿ ಕ್ಷೇತ್ರದಿಂದ ರಘುನಾಥ, ಸಾಲಗಾರ ಪ.ಪಂಗಡ ಕ್ಷೇತ್ರದಿಂದ ಸತೀಶ್‌ ನಾಯ್ಕ ಬಹುಮತ ಗಳಿಂದ ಜಯ ಸಾಧಿಸಿದ್ದಾರೆ.

Related posts

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಣಿಯೂರು ವಲಯದ ಮೈರೋಲ್ತಡ್ಕ, ಮೊಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಸೆ.24 : ಉಜಿರೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಹಾಗೂ ಸಮವಸ್ತ್ರ ವಿತರಣೆ

Suddi Udaya

ಮರೋಡಿ : 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!