March 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮ ಉದ್ಘಾಟನೆ

ಪುತ್ತೂರು: ಸೇವಾಭಾರತಿ ಸೇವಾಧಾಮ ಇದರ ಆಶ್ರಯದಲ್ಲಿ ಆದರ್ಶ ಆಸ್ಪತ್ರೆ, ಪುತ್ತೂರು ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ), ಪುತ್ತೂರು ಇವರ ಸಹಯೋಗದಲ್ಲಿ ಎಂ. ಸಂಜೀವ ಶೆಟ್ಟಿ, ಜವಳಿ ವ್ಯಾಪಾರಸ್ಥರು ಪುತ್ತೂರು ಮತ್ತು ಸೋಜಾ ಮೆಟಲ್ ಮಾರ್ಟ್, ಪುತ್ತೂರು ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ ಡಿ.8 ರಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾ. ವೈ. ಸುಬ್ರಾಯ ಭಟ್, ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಆದರ್ಶ ಆಸ್ಪತ್ರೆ, ಪುತ್ತೂರು ಇವರು ಉದ್ಘಾಟಿಸಿ, ಶುಭ ಹಾರೈಸಿದರು.

ಕೆ. ವಿನಾಯಕ ರಾವ್, ಖಜಾಂಚಿ, ಸೇವಾಭಾರತಿ ಮತ್ತು ಸಂಸ್ಥಾಪಕರು, ಸೇವಾಧಾಮ ಇವರು ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ಥಾವಿಕ ನುಡಿಯನ್ನು ಆಡಿದರು. ಡಾ. ಎಂ.ಕೆ ಪ್ರಸಾದ್ ಭಂಡಾರಿ, ಸರ್ಜನ್ ಆದರ್ಶ ಆಸ್ಪತ್ರೆ, ಪುತ್ತೂರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಇಂತಹ ಶಿಬಿರವನ್ನು ಇನ್ನೂ ಹೆಚ್ಚು ಆಯೋಜಿಸಲು ಸದಾ ನಾವು ಸಹಕರಿಸುತ್ತೇವೆ ಹಾಗೂ ಶಿಬಿರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸಹಜ್ ರೈ, ಸ್ಥಾಪಕಾಧ್ಯಕ್ಷರು, ವಿಜಯ ಸಾಮ್ರಾಟ್ (ರಿ ), ಪುತ್ತೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಅವರು ಸೇವಾಧಾಮದ ನೂತನ ಕಟ್ಟಡ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಇನ್ನೊರ್ವ ಅತಿಥಿ ಡಾ. ದೀಪಕ್ ರೈ, ತಾಲೂಕು ಆರೋಗ್ಯಧಿಕಾರಿ, ಪುತ್ತೂರು ತಾಲೂಕು ಇವರಿಗೂ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರವನ್ನು ಸ್ವೀಕರಿಸಿ ಇವರು ಪುತ್ತೂರು ತಾಲೂಕಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ಎಲ್ಲಾ ದಿವ್ಯಾoಗರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಎರಡು ತಿಂಗಳ ಒಳಗೆ ದೊರಕಿಸುವುದಾಗಿ ಭರವಸೆ ನೀಡಿದರು.

ಡಾ. ಶ್ಯಾಮ್ ಭಟ್, ವೈದ್ಯಾದಿಕಾರಿ, ಆದರ್ಶ ಆಸ್ಪತ್ರೆ ಪುತ್ತೂರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸೇವಾಭಾರತಿ ಸಂಸ್ಥೆಗೆ ಹಾಗೂ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

Related posts

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಬೆಳ್ತಂಗಡಿ: ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಖಂಡಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Suddi Udaya

ಕಳೆಂಜ: ಶಾಲೆತ್ತಡ್ಕ ಸರಕಾರಿ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯಿಂದ ಸಿಎಂ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಬೆಳಾಲು: ಮಾಯ ಸ.ಉ.ಪ್ರಾ. ಶಾಲೆಯಲ್ಲಿ ರೂ.8.35 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Suddi Udaya
error: Content is protected !!