ಧರ್ಮಸ್ಥಳ : ಚಂದ್ರ ಗಿರಿ ನಗರದ ಪೊಸೋಳಿಕೆ, ಅಂಗನವಾಡಿ ಕೇಂದ್ರಕ್ಕೆ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಅಂಗನವಾಡಿ ಕೇಂದ್ರ ದ ಪುಟಾಣಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದ ಅರಿವು ಮೂಡಿಸಲು ದೂರದರ್ಶನ (ಟಿ ವಿ) ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸುಂದರ ಡಿ, ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕ ತಂಗಚ್ಚನ್, ನೀಲಕಂಠ ಶೆಟ್ಟಿ, ಉಮಾನಾಥ್, ಇವರಿಂದ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ರೇವತಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಬಿಂದು ಉಪಸ್ಥಿತರಿದ್ದರು.