26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಸ್‌.ಡಿ.ಎಂ ಮನೋವಿಜ್ಞಾನ ವಿಭಾಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ಅನನ್ಯ ಕಾರ್ಯಕ್ರಮಗಳ ಪ್ರಯೋಗ

ಉಜಿರೆ: ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 25 ವರ್ಷಗಳ ಮೌಲಿಕ ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ಕೌಶಲ್ಯಯುತ ಹೆಜ್ಜೆಗಳನ್ನು ಮೆಲುಕು ಹಾಕುವ ಉದ್ದೇಶದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ‌.ಕುಮಾರ ಹೆಗ್ಡೆ ತಿಳಿಸಿದರು.

ಅವರು ಡಿ.9 ರಂದು ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜನಸಾಮಾನ್ಯರಲ್ಲಿ ಮನೋವಿಜ್ಞಾನದ ಕುರಿತು ತಿಳುವಳಿಕೆ ಮೂಡಿಸುವ ಸಮುದಾಯಕೇಂದ್ರಿತ ಕಾರ್ಯಕ್ರಮಗಳು, ಮನೋವಿಜ್ಞಾನದ ಮೈಲಿಗಲ್ಲುಗಳನ್ನು ಸಂಕೇತಿಸುವ ಮಹತ್ವದ ದಿನಾಚರಣೆಯ ಮಹತ್ವ ಸಾರುವ ವಾಕಥಾನ್, ಹೊಸ ಪೀಳಿಗೆಯನ್ನು ಮನೋವಿಜ್ಞಾನದ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿಸಲು ಪ್ರೇರಣೆ ನೀಡುವ ವೃತ್ತಿಪರ ಮಾರ್ಗದರ್ಶಿ ಕಾರ್ಯಾಗಾರಗಳು, ಮನೋವಿಜ್ಞಾನವನ್ನು ಮಕ್ಕಳ ಕಲಿಕೆ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿಸಿ ಅನ್ವಯಿಸುವ ಶಾಲಾದತ್ತು ಯೋಜನೆಯಡಿ ವಿವಿಧ ತರಬೇತಿ, ಮನೋವಿಜ್ಞಾನ ವಿಭಾಗದ ಬೆಳವಣಿಗೆಗೆ ವೃತ್ತಿಪರ ಕೊಡುಗೆಗಳನ್ನು ನೀಡಿದ ಬೋಧಕರನ್ನು ಗೌರವಿಸುವ ‘ಗುರುವಂದನಾ’, ವಿವಿಧೆಡೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವ ಚಾರಿಟಿ ಕಾರ್ಯಕ್ರಮ, ಮನೋವಿಜ್ಞಾನದ ಸಮಗ್ರ ಸ್ವರೂಪವನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮನೋವಿಜ್ಞಾನದ ಆಧಾರದಲ್ಲಿ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದಕ್ಕೆ ನೆರವಾಗುವ ಮಾರ್ಗದರ್ಶಿ ಕಾರ್ಯಾಗಾರ, ಮನೋವಿಜ್ಞಾನದ ಸಿದ್ಧಾಂತಗಳನ್ನು ಆಧರಿಸಿ ಸಾಹಿತ್ಯ ರಚನೆಯ ಕೌಶಲ್ಯ ಬೆಳೆಸುವ ಪ್ರಯೋಗಳನ್ನು ಕೇಂದ್ರೀಕರಿಸಿಕೊಂಡ 25 ಬಗೆಯ ಕಾರ್ಯಕ್ರಮಗಳನ್ನು ವಿಭಾಗವು ಏರ್ಪಡಿಸಲಿದೆ ಎಂದರು.

ಡಿಸೆಂಬರ್ 13 ಮತ್ತು 14ರಂದು ‘ಬ್ರೇಕಿಂಗ್ ಬ್ಯಾರಿಯರ್ಸ್: ಅಡ್ವಾನ್ಸಿಂಗ್ ಸೈಕಲಾಜಿಕಲ್ ವೆಲ್‌ಬೀಯಿಂಗ್ ಅಕ್ರಾಸ್ ಬಾರ್ಡರ್ಸ್’ ಶೀರ್ಷಿಕೆಯಡಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಿದೆ. ಅಮೆರಿಕಾದ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಮನೋಶಾಸ್ತ್ರಜ್ಞೆ ಡಾ.ಕ್ಯಾರೋಲ್.ಡಿ.ರಿಫ್, ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರಮೇಶ್ ಸಾಲಿಯಾನ್ .ಕೊಲ್ಕೋತ್ತಾದ ಪ್ರಾಧ್ಯಾಪಕರಾದ ಡಾ.ಸುಮಿತ್ ದತ್ತಾ ಅವರು ಭಾಗವಹಿಸಲಿದ್ದಾರೆ ಎಂದರು.

ಈ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಿ.13 ರಂದು ಬೆಳಿಗ್ಗೆ 10ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರಮೇಶ್ ಸಾಲಿಯಾನ್,ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಂ.ವೈ.ಮಂಜುಳಾ, ಕ್ಷೇಮವನದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಮತ್ತು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ,ಉಜಿರೆ ಎಸ್.ಡಿ.ಎಂ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಚಾಲಕಕಿ ಡಾ.ವಂದನಾ ಜೈನ್,ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗ್ಡೆ,ಅಶ್ವಿನಿ ಎಸ್ ಶೆಟ್ಟಿ, ಡಾ.ಮಗೇಶ್ ಬಾಬು ಎನ್,ಆಶ್ವಿನಿ ಹೆಚ್.ಸಿಂಧು ವಿ,ರಮ್ಯ ಕೆ,ಸುಧೀರ್ ಕೆವಿ,ಪದ್ಮಶ್ರೀ ಕೆ, ಉಪಸ್ಥಿತರಿದ್ದರು.

Related posts

ಕಾಯರ್ತಡ್ಕ: ಗಾಳಿ ಮಳೆಗೆ ಸೋಲಾರ್ ಮೇಲೆ ಮರಬಿದ್ದು ನಷ್ಟ

Suddi Udaya

ಡಿ.3: ಬೆಳ್ತಂಗಡಿ ಹಳೆಕೋಟೆ ಜೋರ್ಡನ್ ರಿವರ್ ವೆಲ್ ವ್ಯೂ ರೂಮ್ಸ್ & ಸೂಟ್ಸ್ ವಿಸ್ಕೃತ ಕಟ್ಟಡದ ಉದ್ಘಾಟನೆ

Suddi Udaya

ಇಳಂತಿಲ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವೆಂಕಟ್ರಮಣ ಭಟ್, ಉಪಾಧ್ಯಕ್ಷರಾಗಿ ಉಮಾವತಿ ಆಯ್ಕೆ

Suddi Udaya

ಪಿಲಾತಬೆಟ್ಟು: ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Suddi Udaya

ಲಾಯಿಲ: ಕರ್ನೊಡಿ ಜಯ ಶೆಟ್ಟಿ ನಿಧನ

Suddi Udaya
error: Content is protected !!