23.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ದಿಡುಪೆ : ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ನೂತನ ಪದಾಧಿಕಾರಿಗಳ ಆಯ್ಕೆ

ಮಲವಂತಿಗೆ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ದಿಡುಪೆ ಇದರ ಮಹಾಸಭೆಯು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷ ಕೆ ಯು ಇಬ್ರಾಹಿಂ ರವರ ಸಭಾಧ್ಯಕ್ಷತೆಯಲ್ಲಿ ದಿಡುಪೆ ಮದ್ರಸದಲ್ಲಿ ನಡೆಯಿತು.

ವೇದಿಕೆಯಲ್ಲಿ ದರ್ಗಾ ಶರೀಫ್ ಕಾಜೂರು ಇದರ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್, ಕೋಶಾಧಿಕಾರಿ ಮೊಹಮ್ಮದ್ ಕಮಲ್, ಉಪಾಧ್ಯಕ್ಷ ಬದ್ರುದ್ದೀನ್, ಸದಸ್ಯರಾದ ಎನ್.ಎಮ್ ಯಾಕುಬ್ , ಸಿದ್ದಿಕ್ ಹೆ.ಹೆಚ್ , ಎ.ಯು ಮೊಹಮ್ಮದಲಿ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸರ್ವಾನುಮತದದೊಂದಿಗೆ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ಅಧ್ಯಕ್ಷರಾಗಿ ಇದಿನಬ್ಬ ಅಡ್ಕ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಪಯ್ಯೇ, ಪ್ರ ,ಕಾರ್ಯದರ್ಶಿಯಾಗಿ ಅಬೂಬಕ್ಕರ್ ಫೈಝಿ, ಜೊತೆ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶಿರ್ಲಾ, ಕೋಶಾಧಿಕಾರಿಯಾಗಿ ಎನ್.ಎ ಅಬೂಬಕ್ಕರ್, ಸದಸ್ಯರುಗಳಾಗಿ ಉಸ್ಮಾನ್ ಅಡ್ಕ, ಕಬೀರ್ ದಿಡುಪೆ, ಅಶ್ರಫ್ ಅಡ್ಕ, ಶರೀಫ್ ಪಯ್ಯೇ, ಅಬ್ದುಲ್ ರಹ್ಮನ್ ಬೆದ್ರಮಾರ್,
ನಿಝಮುದ್ದೀನ್ ಅಜಲ್ ನೆಕ್ಕಿ ಆಯ್ಕೆಯಾದರು.


ಸಭಾಧ್ಯಕ್ಷ ಕೆ ಯು ಇಬ್ರಾಹಿಂ ಶುಭ ಹಾರೈಸಿ, ಕಾರ್ಯದರ್ಶಿ ನಿಝಮ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಸ್ವಾಗತಿಸಿದರು. ಪ್ರಸ್ತುತ ಸಾಲಿನ ಅಧ್ಯಕ್ಷ ಇದಿನಬ್ಬ ಅಡ್ಕ ಧನ್ಯವಾದವಿತ್ತರು.

Related posts

ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಯವರಿಂದ ಸಾರ್ವಜನಿಕರಿಗೆ ಸೂಚನೆ

Suddi Udaya

ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

Suddi Udaya

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya
error: Content is protected !!