ಬಾರ್ಯ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ,ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಬಾರ್ಯ-ಪುತ್ತಿಲ-ತೆಕ್ಕಾರು ಇದರ ಜಂಟಿ ಆಶ್ರಯದಲ್ಲಿ ಗುರು ಪೂಜೆ ಹಾಗೂ ಸಭಾ ಕಾರ್ಯಕ್ರಮ ಮಿತ್ತೇರಿಪಾದೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊ.ತುಕಾರಾಮ ಪೂಜಾರಿಯವರು ಮಾತನಾಡುತ್ತಾ ಸಂಘಟನೆಗಳು ವರ್ಷಕ್ಕೊಮ್ಮೆ ಗುರು ಪೂಜೆ ಅಥವಾ ಕ್ರೀಡಾಕೂಟಕ್ಕೆ ಸೀಮಿತವಾಗದೆ ಕಲೆ ಸಾಹಿತ್ಯಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಿ ನಿರಂತರ ಚಟುವಟಿಕೆ ಕೇಂದ್ರವಾಗಬೇಕು ಅಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಪ್ರತಿಭೆಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಬೇಕು ಆ ಮೂಲಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆಯನ್ನು ಸಾಕಾರಗೊಳಿಸಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ ಸಂಘದ ತಾಲೂಕು ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿ ಸಂಘವು ಇತರ ಸಮಾಜವನ್ನು ವಿರೋಧಿಸುವುದಲ್ಲ ಅಲ್ಲಿ ಇರುವ ಒಳ್ಳೆಯ ಅಂಶವನ್ನು ನಮ್ಮಲ್ಲಿ ಅಳವಡಿಸಿ ಸಮಾಜದ ದುರ್ಬಲರ ಉದ್ಧಾರಕ್ಕೆ ಶ್ರಮಿಸಬೇಕು ಎಂದರು.
ಅತಿಥಿಯಾಗಿ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್ ಮಾತನಾಡಿ ಗುರುಗಳ ಉದ್ದೇಶದಂತೆ
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಬೆಳೆಯಬೇಕು ಎಂದರು. ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ನಿತೀಶ್ .ಹೆಚ್ ಗೌರವ ಉಪಸ್ಥಿತರಾಗಿ ಹಿರಿಯರಾದ ಬಟ್ಯಪ್ಪ ಪೂಜಾರಿ ಆದಮ್ಮ ಗುತ್ತು,ಮೋನಪ್ಪ ಪೂಜಾರಿ ಕಲಾಯಿ ಗುತ್ತು , ಶಿವಪ್ಪ ಪೂಜಾರಿ ಬೇನಪ್ಪ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ತಾಲೂಕು ಸಂಘದ ನಿರ್ದೇಶಕ ಕಾರ್ಯಕ್ರಮದ ಸಂಘಟಕರಾದ ಶ್ರೀಮತಿ ಉಷಾ ಶರತ್, ಹಾಗೂ ಗುಣಾಕರ ಅಗ್ನಾಡಿ ,ಬಾರ್ಯ-ತೆಕ್ಕರು ಗ್ರಾಮಸಮಿತಿ ಅಧ್ಯಕ್ಷ ದಿನೇಶ್ ಸಾಲಿಯಾನ್ ಉಪಸ್ಥಿತರಿದ್ದರು.
ಬಾರ್ಯ-ಪುತ್ತಿಲ ಗ್ರಾಮ ಸಮಿತಿ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಪ್ರಸ್ತಾವನೆ ಗೈದರು ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸ್ನೇಹಾ ಕಿಶೋರ್ ಚಂದ್ ದಂಪತಿಗಳನ್ನು ಅಭಿನಂದಿಸಲಾಯಿತು .ಸಂತೋಷ್ ಕುಮಾರ್ ಬಜೆಕಲ ,ಪ್ರವೀಣ್ ಬೇoಗಿಲ, ಶಂಕರ ಪುತ್ತಿಲ, ಹರ್ಷಿತ್ ಕಾಲಾಯ ,ಅರುಣ್ ಬಜಕ್ಕಳ , ಸವಿತಾ ಮಿತ್ತೇರಿಪಾದೆ , ಪ್ರಮೀಳಾ ಬಜಕ್ಕಳ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಚಿದಾನಂದ ಶಾಂತಿ ಹಾಗೂ ಸಂಗಡಿಗರು ಗುರುಪೂಜೆ ನೆರವೇರಿಸಿದರು .
ಸ್ಪಂದನ್ ಕಾರ್ಯ ಕ್ರಮ ನಿರೂಪಿಸಿದರು. ಕು| ತನ್ವಿ ಜೆಪಿ ಮತ್ತು ಕು| ತಶ್ವಿ ಜೆಪಿ ಪ್ರಾರ್ಥನೆ ಗೈದರು. ನಿವೃತ ಯೋಧ ರೋಹಿತ್ ಸುಣ್ಣಾಜೆ ವಂದಿಸಿದರು.