ಬೆಳ್ತಂಗಡಿ: ಭಾರತರತ್ನ ಡಾ| ಬಿ.ಆರ್ ಅಂಬೇಡ್ಕರ್ ರವರ ಪರಿನಿಬ್ಬಾಣದ ಪ್ರಯುಕ್ತ ಲಾಯಿಲ ದಯಾ ವಿಶೇಷ ಶಾಲೆಗೆ ಡಿ.09 ರಂದು ಮಾಲಾಡಿ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ವತಿಯಿಂದ ಮಧ್ಯಾಹ್ನದ ಊಟವನ್ನು ನೀಡಲಾಯಿತು..
ಈ ಸಂದರ್ಭದಲ್ಲಿ ಜನ್ಮ ದಿನಾಚರಣಾ ಸಮಿತಿಯ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುನೀತಾ, ಕೋಶಾಧಿಕಾರಿ ಪ್ರಶಾಂತ್ ಹಾಗೂ ಸದಸ್ಯರುಗಳಾದ ಬಾಬಿ, ಶಂಕರ್, ಆನಂದ, ಶೇಖರ್, ಹರೀಶ್, ಯುವರಾಜ್, ಸುನಿಲ್, ಪ್ರೇಮ್, ರಾಕೇಶ್, ಗಿರೀಶ್, ಗುಲಾಬಿ, ಪುಷ್ಪಾ , ಸುರಕ್ಷಿತಾ, ಸುಪ್ರೀತಾ, ಶಾಲಿನಿ ಉಪಸ್ಥಿತರಿದ್ದರು.