23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪದ್ಮುಂಜದಲ್ಲಿ 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರದ ಸಮಾರೋಪ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅದಿತಿ ಮುಗೆರೋಡಿ ರವರಿಗೆ ಸನ್ಮಾನ

ಪದ್ಮುಂಜ : ಪದ್ಮುಂಜ ಕೃಷಿ ಪತ್ತಿನ ಸಹಕಾರಿ ನಿಯಮಿತ ಇದರ ವಠಾರದಲ್ಲಿ ಆವಿಷ್ಕಾರ ಯೋಗ ಮಂಗಳೂರು ಹಾಗೂ 13 ಸಹ ಸಂಘಟನೆಗಳ ನೇತೃತ್ವದಲ್ಲಿ ಡಿ7, ರಂದು 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರವು 8 ಬ್ಯಾಚ್‌ನಲ್ಲಿ ನಡೆಯಿತು. ತಲಾ 1 1/2 ಗಂಟೆಯ ತರಬೇತಿಯಲ್ಲಿ ನಿತ್ಯ ಯೋಗಾಭ್ಯಾಸಕ್ಕೆ ಬೇಕಾದ ಸರಳಿ ಯೋಗಾಸನ, ಕ್ರಿಯೆ, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಲಾಯಿತು. 5 ವರ್ಷದ ಪುಟಾಣಿಯಿಂದ 73 ವರ್ಷದ ಹಿರಿಯರಾಗಿ ಸುಮಾರು 550 ಕ್ಕೆ ಮಿಕ್ಕಿ ಗ್ರಾಮೀಣ ಪ್ರದೇಶದ ಜನರು ಯೋಗ ತರಬೇತಿಗೆ ಒಳಪಟ್ಟರು ನಿರಂತರ 12 ಗಂಟೆಗಳ ತರಬೇತಿಯನ್ನು ಆವಿಷ್ಕಾರ ಯೋಗ ಸ್ಥಾಪಕ ಯೋಗ ಗುರು ಕುಶಾಲಪ್ಪ ಗೌಡ ತರಬೇತಿ ನಡೆಸಿಕೊಟ್ಟರು.

ಸಮಾರೋಪ ಅಧ್ಯಕ್ಷತೆ ವಹಿಸಿದ ಸಿ.ಎ ಬ್ಯಾಂಕು ಪದ್ಮುಂಜ ಅಧ್ಯಕ್ಷ ರಕ್ಷಿತ್ ಪಣಿಕರ್ ಮಾತನಾಡಿ ಆಧುನಿಕ ಜೀವನ ಮತ್ತು ಹಲವಾರು ಕಾರಣಗಳಿಂದ ಜನರ ಆರೋಗ್ಯ ಬಹಳ ಬೇಗನೆ ಹದಗೆಡುತ್ತಿದ್ದು ಯೋಗ ಅಭ್ಯಾಸ ಆರೋಗ್ಯ ಕಾಪಾಡಲು ಸಹಕಾರಿ ಎಂದರು. ಸರಕಾರಿ ಶಾಲಾಭಿವೃದ್ಧಿಯ ಮ್ಯಾರಥಾನ್ ಯೋಗ ಶಿಬಿರ ಶ್ಲಾಘಣೀಯ ಎಂದರು.

ಶಿಬಿರಾರ್ಥಿಗಳಿಂದ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ.) ಮೊಗ್ರು ಇದರ ವಿಧ್ಯಾನಿಧಿಗೆ ದೇಣಿಗೆಯನ್ನು ಸಂಗ್ರಹಿಸಲಾಯಿತು. ಸಂಗ್ರಹವಾದ ಮೊತ್ತವನ್ನು ಸರಕಾರಿ ಶಾಲಾಭಿವೃದ್ಧಿಗೆ ಬಳಸಲು ಉದ್ದೇಶಿಸಲಾಗಿದೆ.
ಈ ವೇಳೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅದಿತಿ ಮುಗೆರೋಡಿರವರನ್ನು ಸನ್ಮಾನಿಸಲಾಯಿತು ಹಾಗೂ ಮ್ಯಾರಥಾನ್ ಯೋಗ ತರಬೇತಿ ಶಿಬಿರದ ಸಹಸಂಘಟಕರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಅಶೋಕ ಪಾಂಜಾಳ, ಮೂವರು ದೈವಗಳ ದೈವಸ್ಥಾನ ಮುಗೇರಡ್ಕ ಮೊಗ್ರು ಆಡಳಿತ ಮೊಕ್ತೇಸರರು ರಾಮಣ್ಣ ಗೌಡ ದೇವಸ್ಯ, ಶಾರದ ಕಲಾ ಕೇಂದ್ರ ವಿಧುಷಿ ಶ್ರೀಮತಿ ಡಿಂಪಲ್ ಶಿವರಾಜ್ , ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಕು.ಕೀರ್ತಿ , ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಪದ್ಮುಂಜ ಘಟಕ ಸಂಚಾಲಕರು ದಿನೇಶ್ ಮಲ್ಲೆಂಗಲ್ಲು, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಪುರುಷೋತ್ತಮ , ಜ್ಞಾನ ಜ್ಯೋತಿ ಯುವಕ ಮಂಡಲ ಅಡಂಜೆ ಅಧ್ಯಕ್ಷ ರಾಜೇಶ್ ಶೆಟ್ಟಿ, ಟೀಮ್ ನವಕೇಸರಿ ಮಲೆಂಗಲ್ಲು ಅಧ್ಯಕ್ಷ ಶರತ್, , ಯುವ ವೇದಿಕೆ ಮುಗೇರಡ್ಕ ಮೊಗ್ರು ಅಧ್ಯಕ್ಷ ಪ್ರವೀಣ್ , ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ ರಿ. ಮುಂಡೂರು ಅಧ್ಯಕ್ಷ ಅಶ್ವತ್ ಮುಂಡೂರು, ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಾಂಜಾಲ ಅಧ್ಯಕ್ಷ ನೋಣಯ್ಯ ಗೌಡ, ಶ್ರೀ ಚಕ್ರ ಗೆಳೆಯರ ಬಳಗ ಕಾಂತಾಜೆ ಬೊಳ್ಜೆ ಬಂದಾರು ಅಧ್ಯಕ್ಷ ದೇಜಪ್ಪ, ಉದಯ ಬಿ.ಕೆ ವಕೀಲರು , ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀರಾಮ ನಗರ ಬಂದಾರು ಅಧ್ಯಕ್ಷ ಡೀಕಯ್ಯ ,ಶ್ರೀ ಸದಾಶಿವ ಭಜನಾ ಮಂಡಳಿ ರಿ. ಕುರಾಯ ಬಂದಾರು ಅಧ್ಯಕ್ಷ ಧನಂಜಯ ಗೌಡ ಪಿಲಿಂಗುಡೇಲು, ಮೂವರು ದೈವಗಳ ದೈವಸ್ಥಾನ ಮುಗೇರಡ್ಕ ಮೊಗ್ರು ಮೊಕ್ತೇಸರರು ಮನೋಹರ ಅಂತರ, ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು ಅಧ್ಯಕ್ಷ ಲೋಕೇಶ್ ದಂಬೆತ್ತಿಮಾರು ಉಪಸ್ಥಿತರಿದ್ದರು.


Related posts

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕಾಶಿಬೆಟ್ಟು ಹೆದ್ದಾರಿಯಲ್ಲಿ ನಿಮಾ೯ಣವಾದ ಬಾವಿಯಾಕಾರದ ಹೊಂಡ, ಗುಂಡಿಗಳು ಸಂಚಾರಕ್ಕೆ ವಾಹನಗಳ ಪರದಾಟ, ಪ್ರತಿದಿನ ವಾಹನ ಬ್ಲಾಕ್

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya

ಉಜಿರೆ: ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ: ಎಸ್‌ಡಿಎಂ ಐಟಿ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ. ಜೀವಂದರ್ ರವರಿಗೆ ಪಿ.ಹೆಚ್.ಡಿ ಪದವಿ

Suddi Udaya

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಪಟ್ಟಣ ಪಂಚಾಯತು ಅಧಿಕಾರಾವಧಿ ನ.7ಕ್ಕೆ ಮುಕ್ತಾಯ: ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ ಮೊಟಕು

Suddi Udaya
error: Content is protected !!