19 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ : ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಡುಗೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಿದ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು. ದೂರ ಪ್ರಯಾಣದಿಂದ ಅನಾರೋಗ್ಯಕ್ಕೆ ತುತ್ತಾದ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಶ್ರೀ ಕ್ಷೇತ್ರದ ವತಿಯಿಂದ ರೂ.4,೦೦,೦೦೦/-(ನಾಲ್ಕು ಲಕ್ಷ) ಮೌಲ್ಯದ ಔಷಧಿಯನ್ನು ಡಿ. ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ (ರಿ.) ಮೂಲಕ ಆಸ್ಪತ್ರೆಯ ವೈದ್ಯೆ ಡಾ|| ಮಂಜು ಇವರಿಗೆ , ಮೆಡಿಕಲ್ ಟ್ರಸ್ಟ್ನ ಕಾರ್ಯದರ್ಶಿ ಶಿಶುಪಾಲ್ ಪೂವಣಿಯವರು ಔಷಧಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹಸ್ತಾಂತರಿಸಿದರು. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಾಗೂ ಸ್ಥಳೀಯ ಜನರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುವುದೆಂದು ಡಾ| ಮಂಜುರವರು ತಿಳಿಸಿದ್ದಾರೆ.

Related posts

ಉರುವಾಲು: ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ನಿಧನ

Suddi Udaya

ಬಂದಾರು ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ದ.ಕ ಜಿಲ್ಲೆಯ ಬಿಜೆಪಿ ವ್ಯಾಪಾರ ವಾಣಿಜ್ಯ ಪ್ರಕೋಷ್ಟದ ಸಹ ಸಂಚಾಲಕರಾಗಿ ಮಿಥುನ್ ಕುಲಾಲ್ ಅಳಕ್ಕೆ ಆಯ್ಕೆ

Suddi Udaya

ಪೆರಿಂಜೆ ಮದರಸ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಕಲೋತ್ಸವ ಸ್ಪರ್ಧೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಪಿಡಿಒ ಆಗಿದ್ದ ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನ

Suddi Udaya

ಈಶ್ವರ ಭಟ್ ಕಾಂತಾಜೆ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಂತಾಪ

Suddi Udaya
error: Content is protected !!