ಕಲ್ಲೇರಿ: ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಹಳೆ ಕಟ್ಟಡ ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್ ನ ಉದ್ಘಾಟನೆಯು ಡಿ.12ರಂದು ನಡೆಯಿತು.
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ದೀಪ ಪ್ರಜ್ವಲಿಸಿ ಸೆಂಟರ್ ನ್ನು ಉದ್ಘಾಟಿಸಿ ಶುಭ ಕೋರಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷೆ ಹೇಮಾವತಿ ಎಂ., ಹಿರಿಯರಾದ ಧರ್ಮಪ್ಪ ಗೌಡ ಹಾಗೂ ದಾಸಪ್ಪ ಗೌಡ, ವೈದ್ಯರಾದ ಸಂತೋಷ್, ವೈದ್ಯೆ ಬುಸ್ರಿಫಾ, ಉದ್ಯಮಿ ಪ್ರಶಾಂತ್ ಕುಮಾರ್ ಬಾರ್ಯ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಉದ್ಯೋಗಿ ಸೂರಪ್ಪ ಪೂಜಾರಿ, ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಗೇರುಕಟ್ಟೆ, ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಆಡಳಿತ ಮಂಡಳಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಪೂಜಾರಿ ಅಳಕ್ಕೆ, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಜಯವಿಕ್ರಮ್ ಕಲ್ಲಾಪು, ಬಾರ್ಯ ಗ್ರಾ.ಪಂ.ಸದಸ್ಯೆ ಉಷಾ ಶರತ್, ಪ್ರಮುಖರಾದ ರಮೇಶ್ ಬಂಗೇರ, ಚೆನ್ನಪ್ಪ ಸಾಲಿಯಾನ್ , ವಿಶ್ವನಾಥ್ ಬಿತ್ತ, ಯೂಸುಫ್, ಮಹ್ಮಮದ್ ಫಾರುಕ್ ಪೆರ್ನೆ, ಬ್ಯಾಂಕ್ ಉಪಾಧ್ಯಕ್ಷ ತಾಜುದ್ದೀನ್,ನಿವೃತ್ತ ವೃತ್ತ ನಿರೀಕ್ಷಕ ಸುದರ್ಶನ್,ನಿವೃತ್ತ ಅಧ್ಯಾಪಕ ಕೂಸಪ್ಪ , ಪ್ರಗತಿ ಪರ ಕೃಷಿಕ ಕಿಶೋರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.
ವೆಲ್‌ನೆಸ್ ಸೆಂಟರ್‌ನಲ್ಲಿ ದಂತ ಚಿಕಿತ್ಸೆ, ಆಯುರ್ವೇದ, ಮಕ್ಕಳ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಎಲುಬು ಮತ್ತು ಕೀಲು ರೋಗ ತಜ್ಞರು, ಎಲೋಪತಿ, ಪ್ರಕೃತಿ ಚಿಕಿತ್ಸೆಗಳು, ಲ್ಯಾಬ್, ಇಸಿಜಿ, ಡೇ ಕೇರ್‌ಗಳು ಲಭ್ಯವಿರುತ್ತದೆ. ಜೊತೆಗೆ ಅಂಬ್ಯುಲೆನ್ಸ್ ಸರ್ವೀಸ್ ಕೂಡ ಇರುತ್ತದೆ ಎಂದು ಹಿರಿಯ ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ತಿಳಿಸಿದರು.