26.5 C
ಪುತ್ತೂರು, ಬೆಳ್ತಂಗಡಿ
September 20, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಕೊಟ್ಟ ಹಣವನ್ನು ವಾಪಸ್ ಕೇಳಲು ಹೋದ ವ್ಯಕ್ತಿಗೆ ತಲ್ವಾರ್ ನಿಂದ ದಾಳಿ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ; ಕೊಟ್ಟ ಹಣ ಮರಳಿ ಕೇಳಲು ಹೋದವರ ಮೇಲೆ ವ್ಯಕ್ತಿಯೋರ್ವ ತಲ್ವಾರ್ ನಿಂದ ಹಲ್ಲೆ ನಡೆಸಿದ ಘಟನೆ ವೇಣೂರು ಠಾಣಾ ವ್ಯಾಪ್ತಿಯ ತೆಂಕಕಾರಂದೂರು ಕಟ್ಟೆ ಎಂಬಲ್ಲಿ ಡಿ.11 ರಂದು ನಡೆದಿದೆ.

ಹಲ್ಲೆಗೆ ಒಳಗಾಗಿರುವ ದಾವೂದ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಟೆ ನಿವಾಸಿ ಇಕ್ಬಾಲ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಪಡಂಗಡಿ ನಿವಾಸಿ ದಾವೂದ್ ಎಂಬವರು ಇಕ್ಬಾಲ್ ಅವರಿಗೆ ರೂ 50 ಸಾವಿರ ನೀಡಿದ್ದು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಕೇಳಲು ಡಿ.11ರಂದು ಸ್ನೇಹಿತರೊಂದಿಗೆ ಇಕ್ಬಾಲ್ ನ ಕಟ್ಟೆಯ ಮನೆಗೆ ಸಂಜೆ ಹೋಗಿದ್ದು ಮನೆಯ ಮುಂದಿನಿಂದ ಮೊಬೈಲ್ ಕರೆ ಮಾಡಿ ಹೊರಗೆ ಕರೆದಿದ್ದಾನೆ. ಈ ವೇಳೆ ಮನೆಯಿಂದ ತಲ್ವಾರ್ ನೊಂದಿಗೆ ಹೊರ ಬಂದ ಆರೋಪಿ ದಾವೂದ್ ನ ತಲೆಗೆ ಕಡಿದಿರುವುದಾಗಿ ಆರೋಪಿಸಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಕಲಂ 109 BNS-2023 ರಂತೆ ಪ್ರಕರಣ ದಾಖಲಾಗಿದೆ.

Related posts

ನಾಡಕಚೇರಿಗಳಲ್ಲಿ ಸರ್ವರ್ ಸಮಸ್ಯೆ-ಜನರು ಹೈರಾಣು

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮಹಿಳಾ ಬ್ಯೂಟೀಪಾರ್ಲರ್ ಮತ್ತು ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ನ್ಯಾಯತರ್ಪು : ರಕ್ತೇಶ್ವರಿ ಪದವು ಬಳಿ ಗುಡ್ಡ ಕುಸಿತ: ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರು , ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

Suddi Udaya

ಕೊಕ್ಕಡದಿಂದ ಮುಂಡೂರುಪಳಿಕೆವರೆಗೆ 3 ಫೇಸ್ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ ಬೆಳ್ತಂಗಡಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರಿಗೆ ಮನವಿ

Suddi Udaya

ಕಳೆoಜ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಕೊಕ್ಕಡ: ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ ನಿಧನ

Suddi Udaya
error: Content is protected !!