ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ 2025 ರ ಕ್ಯಾಲೆಂಡರ್ ನ್ನು ಡಿ. 13 ಸಹಕಾರಿ ಸಂಘದಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳೂ ಆದ ಭವಾನಿ ಶಂಕರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ತಾಲೂಕು ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಕೆ.ಜಯಕೀರ್ತಿ ಜೈನ್ ಆಡಳಿತ ಮಂಡಳಿ ನಿರ್ದೇಶಕರಾದ ಚಂದ್ರಶೇಖರ್, ಪರಮೇಶ್, ಹರಿಪ್ರಸಾದ್, ಶ್ರೀಮತಿ ವಾರಿಜ, ಪ್ರಶಾಂತ್ ಜೈ ನ್ , ರಜಾಕ್ . ಸಲಹೆಗಾರರಾದ ವಸಂತ ಸುವರ್ಣ, ಸುವರ್ಣ ಆರ್ಕೇಡ್ ಕಟ್ಟಡದ ಮಾಲಿಕರಾದ ನಾಣ್ಯಪ್ಪ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ..ಶ್ರೀಮತಿ ವತ್ಸಲಾ ಜ್ಯೋತಿರಾಜ್, ಶ್ರೀಮತಿ ವಿಶಾಲ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಡಾ ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ ಹರಿಪ್ರಸಾದ್ ವಂದನಾರ್ಪಣೆ ಮಾಡಿ ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.