ನಿಡ್ಲೆ: ಇಲ್ಲಿಯ ಕಂರ್ಬಿತ್ತಿಲು ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಭಾರೀ ಗಾತ್ರದ ಮರವು ರಸ್ತೆಗೆ ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರು ಹೋಗುವ ರಸ್ತೆಯಾಗಿದ್ದು ಮರವು ರಸ್ತೆಗೆ ಬೀಳುವ ಸಂಭವವಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಹಲವಾರು ಭಾರಿ ಮಾಹಿತಿ ನೀಡಿದರು ಪ್ರಯೋಜನವಾಗಿಲ್ಲ, ಆದರಿಂದ ಅಪಾಯ ಎದುರಾಗುವ ಮುನ್ನ ಆದಷ್ಟು ಬೇಗ ಅರಣ್ಯ ಇಲಾಖೆಯವರು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.