ಬೆಳ್ತಂಗಡಿ : ವಾಣಿ ಪದವಿ ಪೂರ್ವ ಕಾಲೇಜು ಹಳೆಕೋಟೆ ಬೆಳ್ತಂಗಡಿ ಇದರ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯ ವಿಂಶತಿ ಕಾರ್ಯಕ್ರಮದಲ್ಲಿ ಬಳಂಜ ಬ್ರಹ್ಮಶ್ರೀ ಕುಣಿತ ಭಜನೆಯ ಸದಸ್ಯೆ ಹಾಗೆಯೇ ಮಂಡಳಿಯ ಕಾರ್ಯದರ್ಶಿ ಕು| ಅನುಕ್ಷಾ ಇವರು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸೆ. 17ರಿಂದ 23ರ ವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ 2024-25 ನೇ ಸಾಲಿನ ಶಿಬಿರದಲ್ಲಿ ಭಾಗವಹಿಸಿ ಪ್ರಹಸನ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಮತ್ತು ಜಾನಪದ ಗಾಯನದಲ್ಲಿ ತೃತೀಯ ಬಹುಮಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುವುದರಿಂದ ಇವರನ್ನು ಕಾಲೇಜು ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.