ಬೆಳ್ತಂಗಡಿ: ಗುರುವಾಯನಕೆರೆ ಸಾಯಿ ರಾಮ್ ಫ್ರೆಂಡ್ಸ್ ತಂಡದ ಸಕ್ರಿಯ ಆಹ್ವಾನಿತ ಆಟಗಾರ ಎಸ್. ಡಿ. ಎಮ್ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರತಿಭಾನ್ವಿತ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪ್ರೀತಮ್ ಶೆಟ್ಟಿ ಕಾರ್ಕಳ ಮುಟ್ಲುಪಾಡಿ ನಿವಾಸಿಯಾಗಿದ್ದು ಕಬಡ್ಡಿ ಆಟದ ನಿಮಿತ್ತ ತಮಿಳುನಾಡಿಗೆ ತೆರಳಿದ್ದರು ಆಟದ ನಡುವೆ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.