ಬೆಳ್ತಂಗಡಿ: ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ವಿಜಯಪುರದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ‘ ಭಗವದ್ಗೀತೆಯಲ್ಲಿ ಭ್ರಾತೃತ್ವ ‘ ಎನ್ನುವ ವಿಷಯದಲ್ಲಿ ನಡೆಸಿದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಾಣಿಜ್ಯಶಾಸ್ತ್ರ ವಿಭಾಗದ ಸಂಸ್ಕೃತ ಭಾಷಾ ವಿದ್ಯಾರ್ಥಿನಿ ಹಂಸಿನಿ ಭಿಡೆ ತೃತೀಯ ಬಹುಮಾನ ಪಡೆದಿದ್ದಾರೆ.
ದ.ಕ ಜಿಲ್ಲಾ ಮಟ್ಟದಲ್ಲಿ ಈ ಮೊದಲು ಪ್ರಥಮ ಬಹುಮಾನ ಪಡೆದಿದ್ದಳು. ಈಕೆ ಉಜಿರೆಯ ಪತ್ರಿಕೆ ವಿತರಕರಾದ ಕಲ್ಮಂಜ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಪುತ್ರಿ.