24 C
ಪುತ್ತೂರು, ಬೆಳ್ತಂಗಡಿ
April 3, 2025
ನಿಧನ

ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ ನಿಧನ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ(77ವ) ಡಿ.14 ರಂದು ನಿಧನರಾಗಿದ್ದಾರೆ.

ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23 ರಂದು ಜನಿಸಿದ ಲೀಲಾವತಿ ಅವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ.ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರಮಾವ ರಾಮಕೃಷ್ಣ ಭಟ್ ಮಧೂರು ದೇವಾಲಯದಲ್ಲಿ ದೇವನೃತ್ಯ ಕಲಾವಿದರಾಗಿದ್ದರು.

ಬೆಳ್ತಂಗಡಿಯಲ್ಲಿ ಅರುವ ನಾರಾಯಣ ಶೆಟ್ಟಿ ಅವರ ಅಳದಂಗಡಿ ಮೇಳದಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯ ಅವರರೊಂದಿಗೆ ಭಾಗವತಿಕೆ ಮಾಡಿ ಹಲವು ಯಕ್ಷಗಾನ ಕಲಾವಿದರನ್ನು ಕುಣಿಸಿ ಆ ಕಾಲದಲ್ಲಿ ಖ್ಯಾತಿ ಪಡೆದಿದ್ದರು. ಲೀಲಾವತಿ ಅಮ್ಮನವರ ಪದ್ಯ ಇದೆ ಎಂದು ಅನೇಕರು ಯಕ್ಷಗಾನಗಳಿಗೆ ಬರುತ್ತಿದ್ದರು.ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತೆ ಎಂಬ ಖ್ಯಾತಿ ಅವರದ್ದಾಗಿತ್ತು.ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿಯೂ ಭಾಗವತಿಕೆ ಮಾಡಿದ್ದರು.

ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು. ಪತ್ರಕರ್ತ ಅವಿನಾಶ್ ಹಾಗೂ ಗುರುಪ್ರಸಾದ್ ಅವರ ಪುತ್ರರು.

Related posts

ಗುಂಡೂರಿ ಸತ್ಯನಾರಾಯಣ ಪೂಜಾ ಭಜನಾ ಮಂದಿರದ ಅರ್ಚಕ ಸಿ‌.ಕೃಷ್ಣ ಭಟ್ ನಿಧನ

Suddi Udaya

ನಿವೃತ್ತ ಮುಖ್ಯೋಪಾಧ್ಯಾಯ, ಭರತನಾಟ್ಯ ಗುರು ಕಮಲಾಕ್ಷ ಆಚಾರ್ಯ ನಿಧನ

Suddi Udaya

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya

ಬೆಳ್ತಂಗಡಿ: ಅಧಿಕ ರಕ್ತದೊತ್ತಡದಿಂದ ಪ್ರವೀಣ್ ಆಚಾರ್ಯ ನಿಧನ

Suddi Udaya

ಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ

Suddi Udaya

ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾದ ಮಾಚಾರು ಗೋಪಾಲ ನಾಯ್ಕ ನಿಧನ

Suddi Udaya
error: Content is protected !!