ಉಜಿರೆ: ಬೆಳಾಲು ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಡಿ.15ರಂದು ಮಧ್ಯಾಹ್ನ ನಡೆದಿದೆ.
ಉಜಿರೆಯಿಂದ ಬೆಳಾಲು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ಹಾಗೂ ಬೆಳಾಲು ಕಡೆಯಿಂದ ಉಜಿರೆಯತ್ತ ಬರುತ್ತಿದ್ದ ಕಾರು ನಡುವೆ ಮಾಚಾರು ಸಮೀಪದ ನಿನ್ನಿಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.
ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.