ಕನ್ಯಾಡಿ ll: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ಪ್ರಯುಕ್ತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯ ಬಹುಮಾನವನ್ನು ಡಿ.12 ರಂದು ವಿತರಿಸಲಾಯಿತು.
ಮುಖ್ಯ ಅತಿಥಿಗಳಾದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ. ಶ್ರೀನಿವಾಸ್ ರಾವ್ ಬಹುಮಾನ ನೀಡುವ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ, ಎಸ್ ಡಿ ಎಂ ಸಿ ಅಧ್ಯಕ್ಷ ನಂದಾ ಕೆ, ಉಪಾಧ್ಯಕ್ಷೆ ಶ್ರೀಮತಿ ರಮ್ಯ, ಗೌರವ ಸಲಹೆಗಾರ ರಾಜೇಂದ್ರ ಅಜ್ರಿ, ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪ ಎನ್, ಎಸ್ ಡಿ ಎಂ ಸಿ ಸದಸ್ಯರು ಮಕ್ಕಳಿಗೆ ಬಹುಮಾನವನ್ನು ವಿತರಿಸಲು ಕೈಜೋಡಿಸಿದರು.
ಶಾಲೆಯ ಸಹ ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕರಾದ ಶ್ರೀಮತಿ ಶ್ವೇತ ಸ್ವಾಗತಿಸಿ, ಸಹ ಶಿಕ್ಷಕರಾದ ಶ್ರೀಮತಿ ರಾಜಿ ಸಿ ಕೆ ಯವರು ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ನಾಗರಾಜ್ ಬಾರ್ಕೆರ್ ನಿರೂಪಿಸಿದರು.