24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಲೋತ್ಸವ

ಕನ್ಯಾಡಿ ll : ಹಳೇ ವಿದ್ಯಾರ್ಥಿ ಸಂಘ ಕನ್ಯಾಡಿ 2 ಇವರ ಸಂಯುಕ್ತ ಆಶ್ರಯದಲ್ಲಿ 2024 -25 ನೇ ಸಾಲಿನ ಪ್ರತಿಭಾ ಕಲೋತ್ಸವವು ಡಿ.13 ರಂದು ಶಾಲಾ ಧ್ವಜಾರೋಹಣದಿಂದ ಪ್ರಾರಂಭವಾಯಿತು.

ಧ್ವಜಾರೋಹಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆಯ ದೈಹಿಕ ಶಿಕ್ಷಣ ಶಿಕ್ಷಕ ಮರಿಯಪ್ಪ ಗೌಡ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟಕರಾದ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲಾ ಪರಮೇಶ್ವರ್ ನೂತನವಾಗಿ ನಿರ್ಮಿಸಿದ ಹೆಣ್ಣು ಮಕ್ಕಳ ಶೌಚಾಲಯವನ್ನು ಉದ್ಘಾಟಿಸಿದರು. ಸತ್ಯಪ್ರಿಯ ಕಲ್ಲೂರಾಯ ಪ್ರಧಾನ ಅರ್ಚಕರು ಸೌತಡ್ಕ ದೇವಸ್ಥಾನ ಇವರು 2024 -25 ನೇ ಸಾಲಿನ ದಾನಿಗಳ ಶಾಶ್ವತ ಫಲಕವನ್ನು ಅನಾವರಣಗೊಳಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ನಂದ ಕೆ, ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲಾ ಪರಮೇಶ್ವರ್ ನೇತೃತ್ವದಲ್ಲಿ ನಡೆಯಿತು. ಶಾಲೆ ಕುರಿತಾದ ಸಂಪೂರ್ಣವಾದ ವರದಿಯನ್ನು ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ವಾಚಿಸಿದರು. ಶಾಲೆಗೆ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ ಮತ್ತು ಸಹಕರಿಸಿದ ಉಮೇಶ್ ಕೆ ಮಾಜಿ ಅಧಿಕಾರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಇಲಾಖೆ , ಶ್ರೀ ರಾಜನ್ ಪೆಟ್ರೋನೆಟ್ ಲಿಮಿಟೆಡ್ ನೆರಿಯಾ, ಮರಿಯಪ್ಪ ಗೌಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ, ಸೌತಡ್ಕ ದೇವಸ್ಥಾನಕ್ಕೆ ಮುಖ್ಯ ಅರ್ಚಕ ಸತ್ಯಪ್ರಿಯ ಕಲ್ಲೂರಾಯ , ಪ್ರಕಾಶ್ ರಾವ್, ಬಿಟ್ಸ್ ಅಂಡ್ ಬೈಟ್ಸ್ ಬೆಂಗಳೂರು, ಗಣೇಶ್ ಬಜಿಲ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವ್ಯಕ್ತಿಗಳಿಗೆ ಗೌರವವನ್ನು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ ಸದಸ್ಯರಾದ ಹರೀಶ್ ಸುವರ್ಣ, ಶ್ರೀಮತಿ ಭಾರತಿ,ಶ್ರೀಮತಿ ರೇವತಿ, ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ರಮ್ಯ , ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪ ಎನ್, ಶಾಲಾ ನಾಯಕ ಸುಜಿತ್ ಉಪಸ್ಥಿತರಿದ್ದರು.

ಪ್ರಸ್ತುತ ಸಾಲಿನ ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಎಸ್ ಎಸ್ ಎಲ್ ಸಿ ಡಿಸ್ಟಿಂಕ್ಷನ್ ಅಂಕ ಪಡೆದ ಕನ್ಯಾಡಿ 2 ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವೇದಿಕೆಯಲ್ಲಿದ್ದ ಗಣ್ಯರು ನೀಡಿದರು. ಪೋಷಕರಿಗೆ ನಡೆಸಿದ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ ಸ್ವಾಗತಿಸಿ, ಅತಿಥಿ ಶಿಕ್ಷಕರಾದ ಶ್ರೀಮತಿ ಶ್ವೇತಾ ಧನ್ಯವಾದವಿತ್ತರು. ಸಹ ಶಿಕ್ಷಕರಾದ ಶ್ರೀಮತಿ ಅರ್ಚನಾ ಮತ್ತು ಶ್ರೀಮತಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಿಂಚನವು ಸಾಯಂಕಾಲ ವಿದ್ಯಾರ್ಥಿಗಳ ವಿವಿಧ ರೀತಿಯ ನೃತ್ಯ, ರೂಪಕಗಳಿಂದ ಬಹಳ ವಿಜೃಂಭಣೆಯಿಂದ ನೆರವೇರಿತು.

Related posts

ಪುದುವೆಟ್ಟು: ವಿಷಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

Suddi Udaya

ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ

Suddi Udaya

ಉಜಿರೆ: ಶ್ರೀ ರಾಧಾ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳದಿಂದ ವಿಶ್ವಗುರು ಭಾರತಕ್ಕಾಗಿ ಗೋ ರಥಯಾತ್ರೆ

Suddi Udaya

ಅಳದಂಗಡಿ: ಬಡಗಕಾರಂದೂರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಅರಸಿನಮಕ್ಕಿ ಮತ್ತೆ ಕಾಡಾನೆ ದಾಳಿ

Suddi Udaya

ಸೋಮಂತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು

Suddi Udaya
error: Content is protected !!