April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 “

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 ” ಡಿ. 14ರಂದು ಶಾಲಾ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕ್ರೀಡೋತ್ಸವನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ ದೀಪ ಬೆಳಗಿಸಿ ಉದ್ಘಾಟಿಸಿ ಹಾಗೂ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸಾಗಬೇಕು. ಮಾನವೀಯತೆಯೆ ನಮ್ಮ ಮೊದಲ ಧರ್ಮವಾಗಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾದ ಸಂಸ್ಥೆಯ ಆಡಳಿತ ಟ್ರಸ್ಟಿನ ಕಾರ್ಯದರ್ಶಿ ಸೈಯದ್ ಅಯ್ಯುಬ್ ಇವರು ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಸಾಧನೆಯನ್ನು ಪ್ರಶಂಸಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ಇವರು” ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಜೊತೆಗೆ ಕ್ರೀಡಾಕೂಟವು ಯಶಸ್ವಿಯಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಕೋಶಾಧಿಕಾರಿ ಸೈಯದ್ ಇರ್ಫಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮಾರ್ಗದರ್ಶಕಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಇವರು 2024- 25 ನೇ ಸಾಲಿನ ವಿಶೇಷ ಸಾಧಕ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಕ್ರೀಡಾ ಜ್ಯೋತಿಯ ಆಗಮನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸುಂದರವಾದ ಪಥ ಸಂಚಲನ ನೆರವೇರಿತು.

ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ನಡ ಇಲ್ಲಿಯ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ 5ನೇ ತರಗತಿಯ ವಿದ್ಯಾರ್ಥಿ ಸಯ್ಯದ್ ಮಹಮ್ಮದ್ ಉವೈಸ್ ಹಾಗೂ ರಾಜ್ಯಮಟ್ಟದ ಕರಾಟೆ ಪಟುವಾದ 9ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ಶರೀಫ್ ಇವರಿಗೆ ಸನ್ಮಾನದ ಗೌರವವನ್ನು ನೀಡಲಾಯಿತು. ಶಾಲಾ ವಿದ್ಯಾರ್ಥಿ ಮೊಹಮ್ಮದ್ ಹಾಶಿಮ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಆಯಿಷತ್ ಲಿಫ್ರಾ ಸ್ವಾಗತಿಸಿದರು. ಕುಮಾರಿ ರಂಝಿಯಾ ಧನ್ಯವಾದವಿತ್ತರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

Related posts

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶಿಕ್ಷಕರ ದಿನಾಚರಣೆ

Suddi Udaya

ಬಳಂಜ: ಶ್ರೀಗುರುಪೂಜೆ ಪ್ರಯುಕ್ತ ಬಿಲ್ಲವ ಸಂಘದಿಂದ ಕ್ರೀಡಾಕೂಟ

Suddi Udaya

ಸುಲ್ಕೇರಿ ಶ್ರೀವಿದ್ಯಾ ಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರದ ಕುಟೀರ ಉದ್ಘಾಟನೆ

Suddi Udaya

ರಾಷ್ಟ್ರೀಯ ಹೆದ್ದಾರಿಯ  ಚರಂಡಿ ದುರಸ್ತಿ           

Suddi Udaya

ಕೊಕ್ಕಡ ಜೇಸಿಐ ಕಪಿಲಾ ಘಟಕಕ್ಕೆ ವಲಯಾಧ್ಯಕ್ಷರ ಭೇಟಿ, ಘಟಕ ವೆಬ್ ಸೈಟ್ ಲೋಕಾರ್ಪಣೆ

Suddi Udaya
error: Content is protected !!