ನಿಡ್ಲೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ನಿಡ್ಲೆ ಇದರ ಪಿಲಿಕಜೆಬೈಲ್ ನವರ ವತಿಯಿಂದ ನಿಡ್ಲೆಯಿಂದ ಅಂಬಿದಂಡ ಕೊರಗಪ್ಪ ಗೌಡರವರ ಮನೆ ತನಕದ ರಸ್ತೆಯ ಗುಂಡಿ ಮುಚ್ಚುವುದು, ರಸ್ತೆಯ ಇಕ್ಕೆಲಗಳ ಗಿಡ -ಗಂಟಿ ತೆಗೆಯುವ ಕೆಲಸಗಳನ್ನು ಶ್ರಮದಾನದ ಮೂಲಕ ಡಿ. 15ರಂದು ನಡೆಯಿತು.
ಶ್ರಮದಾನಕ್ಕೆ ಹಲವರು ಹಣ ಹಾಗೂ ಮೆಷಿನ್ ನೀಡುವುದರ ಮೂಲಕ ಸಹಕರಿಸಿದರು. ಈ ಸಂದರ್ಭದಲ್ಲಿ ಪಿಲಿಕಜೆಬೈಲ್ ನ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದು, ಸಹಕರಿಸಿದರು.