23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಬೈ – ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿದ್ದಂತಹ ವಿವಿಧ ಕೋರ್ಸ್ ಗಳೆಲ್ಲಾ ಇದೀಗ ಪುತ್ತೂರಿನಲ್ಲೂ: VFX, AI, SAP ಕೋರ್ಸ್ ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ; ಅತೀ ಕಡಿಮೆ ಶುಲ್ಕದೊಂದಿಗೆ ನುರಿತ ತಂಡದಿಂದ ತರಬೇತಿ ನೀಡಲಿದೆ ವಿದ್ಯಾಮಾತಾ

ಪುತ್ತೂರು : ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಹೊಸ ವರುಷದ ಸುಸಂದರ್ಭದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಹೊಸ -ಹೊಸ ಬಗೆಯ ತರಬೇತಿಯನ್ನು ಪರಿಚಯಿಸುವ ಪುಟ್ಟದೊಂದು ಪ್ರಯತ್ನ ಮಾಡಿದೆ.


ಪ್ರೌಢ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಥವಾ ಪಡೆಯುತ್ತಿರುವಂತಹ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಯಾರಿಗೊಳಿಸುವ ಹಾಗೂ ಶಿಕ್ಷಣದೊಂದಿಗೆ ಅತ್ಯುತ್ತಮ ಉದ್ಯೋಗ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅತ್ಯುತ್ತಮ ವೇದಿಕೆಯನ್ನು ಸಜ್ಜುಗೊಳಿಸಿ , ಅವರ ಭವಿಷ್ಯ ಬೆಳಗುವ ಕಾರ್ಯ ಕೈಗೆತ್ತಿಕೊಂಡಿದೆ.
ಯುವ ಸಮೂಹ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತಹ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯವೆಸಗುತ್ತಿದ್ದು , ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಿವಿಧ ಕೋರ್ಸ್ ಗಳನ್ನು ಪರಿಚಯಿಸುವ ಕಾಯಕವನ್ನು ಶುರು ಮಾಡಿದೆ.


ಗ್ರಾಮೀಣ ವಿದ್ಯಾರ್ಥಿಗಳಿಗೂ ಕೈಗೆಟಕುವ ಸೇವಾ ಶುಲ್ಕದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಿ , ನೂರಾರು ವಿದ್ಯಾರ್ಥಿಗಳು ಸರಕಾರಿ ಸೇವೆ ಸಲ್ಲಿಸುವಂತೆ ಅವರನ್ನು ಅಣಿಗೊಳಿಸಿರುವ ಕೀರ್ತಿ ವಿದ್ಯಾಮಾತಾ ಅಕಾಡೆಮಿಯ ತಂಡಕ್ಕೆ ಸಲ್ಲುತ್ತಿದ್ದು , ವಾಣಿಜ್ಯ ನಗರಿ ಮುಂಬೈ , ಸಿಲಿಕಾನ್ ಸಿಟಿ ಬೆಂಗಳೂರು ಸಹಿತ ಚೆನೈಯಂತಹ ಬೃಹತ್ ಮಹಾನಗರಗಳಲ್ಲಿ Visual Effect, Artificial Intelligence ಈ ಮೊದಲಾದ ತರಬೇತಿಯು ಅತೀ ದುಬಾರಿಯಾಗಿದ್ದು , ತರಬೇತಿ ಪಡೆಯಲು ಲಕ್ಷಾಂತರ ರೂ ವ್ಯಯಿಸಬೇಕಾಗಿರುತ್ತದೆ.


ಆದರೆ , ಇದೀಗ ಇದೇ ತರಬೇತಿಯನ್ನು ಹೆಸರಾಂತ ವಿದ್ಯಾಮಾತಾ ಕೂಡ ಆರಂಭಿಸಲು ಮುಂದೆ ಬಂದಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಸಹಾಯವಾಗುವ ನಿಟ್ಟಿನಲ್ಲಿ ವಿನೂತನ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.
ತರಬೇತುದಾರರ ಗೌರವಧನ ಸಹಿತ ಕನಿಷ್ಠ ಸೇವಾ ಶುಲ್ಕದೊಂದಿಗೆ ಮೇಲಿನ ತರಬೇತಿಗಳನ್ನು ಈ ಕೂಡಲೇ ಪ್ರಾರಂಭಗೊಳ್ಳಲಿದ್ದು , ಆಸಕ್ತ ವಿದ್ಯಾರ್ಥಿಗಳು ಮತ್ತು ಯುವ ಜನತೆ ಈ ತರಬೇತಿಯ ಸದುಪಯೋಗ ಪಡೆಯುವಂತೆ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಿನಂತಿಸಿದ್ದಾರೆ.


ಲಭ್ಯವಿರುವ ತರಬೇತಿಗಳು :
VFX Plus , Graphics Pro , Graphics Prime , Artificial Hyper , Digital World , SAP-FICO , Tally Trade , Tax Fluence ಕೋರ್ಸ್ ಲಭ್ಯವಿದ್ದು , ಪ್ರವೇಶಾತಿಯೂ ಪ್ರಾರಂಭಗೊಂಡಿದೆ. ಇನ್ನೂ ಹೆಚ್ಚಿನ ವಿವರಗಳಿಗೆ ವಿದ್ಯಾಮಾತಾ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.


ಪುತ್ತೂರು :9148935808 , 96204 68869. ಸುಳ್ಯ ಶಾಖೆ : 9448527606 ಮತ್ತು ಕಾರ್ಕಳ ಶಾಖೆ : 8310484380 ಸಂಪರ್ಕಿಸಬಹುದು.

Related posts

ಮಡಂತ್ಯಾರು ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಲ ಮೂಲ ಶುಚಿತ್ವ ಹಾಗೂ ಹಣ್ಣು ಹಂಪಲು ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಎಸ್‌ಜಿಎಫ್‌ಐ (SGFI) ರಾಷ್ಟ್ರೀಯ ಕಬಡ್ಡಿ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ತಂಡ ಭಾಗಿ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮಾಹಿತಿ ಮತ್ತು ಆಪ್ತ ಸಮಾಲೋಚನಾ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಹಿರಿಯ ಛಾಯಾಗ್ರಹಕ ಕುಶಾಲಪ್ಪ ರೈ ರವರಿಗೆ ಗೌರವಾರ್ಪಣೆ

Suddi Udaya

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!