ಹೊಸಂಗಡಿ : ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿನ್ನು ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಡಿ.15 ರಂದು ಊರಿನ ಸಮಸ್ತ ಬಂಟರ ಸಮ್ಮುಖದಲ್ಲಿ ರಚಿಸಲಾಯಿತು.
ನಂತರ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ರವಿಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಲೋಹಿತ್ ರೈ, ಕಾರ್ಯದರ್ಶಿಯಾಗಿ ಸುಜಾತಾ ಶೆಟ್ಟಿ ಪೆರಿಂಜೆ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಕುಕ್ಕುದಕಟ್ಟೆ, ಹಾಗೂ ಕೋಶಾಧಿಕಾರಿಯಾಗಿ ಸತೀಶ್ ಶೆಟ್ಟಿ ಆಯ್ಕೆಯಾದರು.
ಸಭೆಯಲ್ಲಿ ಬಂಟರ ವಲಯ ಸಮಿತಿಯ ಉಪಾಧ್ಯಕ್ಷ ವಿಶಾಲ್ ಶೆಟ್ಟಿ ಉಪಸ್ಥಿತರಿದ್ದರು. ವೇಣೂರು ವಲಯ ಸಂಯೋಜಕ ರಮೇಶ್ ಶೆಟ್ಟಿ ಮಾರ್ಗದರ್ಶನ ನೀಡಿದರು. ಊರಿನ ಬಂಟ ಸಮುದಾಯದಿಂದ ಹತ್ತು ಜನ ಸದಸ್ಯರನ್ನು ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿ ಆಯ್ಕೆಮಾಡಲಾಯತು. .