24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪ್ರಸನ್ನ ಕಾಲೇಜ್ ಕ್ಯಾಂಪಸ್‌ನಲ್ಲಿ ಹೋಟೆಲ್ ಸಮಡೈನ್ ಶುಭಾರಂಭ ; ಮಾಜಿ ಸಚಿವ ಗಂಗಾಧರ ಗೌಡರಿಂದ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ ಇಲ್ಲಿಯ ಸಂತೆಕಟ್ಟೆಯ ಐ.ಜೆ ಕಾಂಪ್ಲೆಕ್ಸ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ವ್ಯವಹಾರ ನಡೆಸಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವ ಹೋಟೇಲ್ ಸಮಡೈನ್ ಇದರ ನೂತನ ಸಹಸಂಸ್ಥೆ ಲಾಯಿಲದ ಪ್ರಸನ್ನ ಕಾಲೇಜು ಕ್ಯಾಂಪಸ್‌ನಲ್ಲಿ ಡಿ.16 ರಂದು ಶುಭಾರಂಭಗೊಂಡಿತು.


ನೂತನ ಸಮಡೈನ್ ಸಹ ಸಂಸ್ಥೆಯನ್ನು ಮಾಜಿ ಸಚಿವರು ಹಾಗೂ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ. ಗಂಗಾಧರ ಗೌಡ ಅವರು ಉದ್ಘಾಟಿಸಿ, ಬೆಳ್ತಂಗಡಿಯಲ್ಲಿ ಜನಪ್ರಿಯತೆನ್ನು ಪಡೆದಿರುವ ಸಮಡೈನ್ ಹೋಟೇಲ್‌ನ ಸಹ ಸಂಸ್ಥೆಯು ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನ ಮಾಲಕ ಮೋಹನ್ ಕುಮಾರ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್, ಮಹಮ್ಮದ್ ಹುಸೈನ್ ಉದಯನಗರ, ಪ್ರಸನ್ನ ಕಾಲೇಜಿನ ಸಿಬ್ಬಂದಿಗಳು, ಹೋಟೆಲ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಹೋಟೇಲ್‌ನ ಮಾಲಕರಾದ ಅಬೂಬಕ್ಕರ್ ಅವರು ಆಗಮಿಸಿದ ಅತಿಥಿ-ಗಣ್ಯರನ್ನು ಸ್ವಾಗತಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.
ನೂತನ ಹೋಟೇಲ್‌ನಲ್ಲಿ ವಿವಿಧ ರೀತಿಯ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಸೀಪುಡ್, ಚೈನೀಸ್ ಚಾರ್ಟ್ಸ್, ಜ್ಯೂಸ್ ಮತ್ತು ಐಸ್‌ಕ್ರೀಂಗಳು ಗ್ರಾಹಕರ ಸೇವೆಗೆ ಲಭ್ಯವಿದೆ ಎಂದು ಮಾಲಕ ಅಬೂಬಕ್ಕರ್ ಅವರು ತಿಳಿಸಿದ್ದಾರೆ.

Related posts

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಬೆಳ್ತಂಗಡಿ ಕಲ್ಲಗುಡ್ಡೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿ ಉರಿದ ಓಮ್ನಿ ಕಾರು: ಮೂಡಿಗೆರೆ ಬಾಳೂರು ಎಸ್ಟೇಟ್ ನ ಗೀತಾ ಎಂಬವರಿಗೆ ಸೇರಿದ ಕಾರು

Suddi Udaya

ಡಿ.17: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಕೋರಿ ಜಾತ್ರೆ’

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಅಧಿಕಾರ ಸ್ವೀಕಾರ

Suddi Udaya

ಉರುವಾಲು : ಮುಹಮ್ಮದ್ ರಾಝಿಖ್ ದುಬೈನಲ್ಲಿ ಅನುಮಾನಸ್ಪದವಾಗಿ ಸಾವು

Suddi Udaya

ಚಾರ್ಮಾಡಿ ತಿರುವಿನಲ್ಲಿ ಟರ್ನ್ ಆಗದೇ ನಿಂತ 12 ಚಕ್ರದ ಲಾರಿ: ಬೆಳಗ್ಗೆಯಿಂದ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

Suddi Udaya
error: Content is protected !!