ಕೊಕ್ಕಡ: ಇತಿಹಾಸ ಪ್ರಸಿದ್ಧ ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಪ್ರತಿ ನಡೆಯುವ ಸಂಭ್ರಮದ ಕೋರಿ ಜಾತ್ರೆಯು ಡಿ. 17ರಂದು ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಬೆಳ್ಳಿಗೆ ದೇವಸ್ಥಾನದಲ್ಲಿ ಗಣಹೋಮ, ಏಕಾದಶರುದ್ರ ನಡೆದು ಮಧ್ಯಾಹ್ನ ಮಹಾಪೂಜೆ, ನಂತರ ದೇವರ ಗದ್ದೆಗೆ ಜಾನುವಾರುಗಳು ಇಳಿಸಲಾಯಿತು.
ಸಾಯಂಕಾಲ ದೇವರ ಉತ್ಸವ ಹಾಗೂ ಸಂಜೆ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಆಶೀರ್ವಚನದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಸುಲೋಚನಾ ಮತ್ತು ವೆಂಕಟೇಶ ಆರ್ಚಾಯ ನೂಜೆ ಇವರ ಸೇವಾರ್ಥವಾಗಿ ಶ್ರೀ ದೇವಿ ಲಲಿತೋಪಾಖ್ಯಾನ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ಸಂದರ್ಭದಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಎಡಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲ್ಲಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಊರ ಪರವೂರ ಗಣ್ಯರು ಉಪಸ್ಥಿತರಿದ್ದರು.