25.4 C
ಪುತ್ತೂರು, ಬೆಳ್ತಂಗಡಿ
September 11, 2026
ರಾಜ್ಯ ಸುದ್ದಿ

ಬಾಂಜಾರು ಮಲೆ ಮಲೆಕುಡಿಯರ ಜಮೀನು ಸಮಸ್ಯೆ : ವಿಧಾನ ಪರಿಷತ್ ನಲ್ಲಿ ಸರಕಾರದ ಗಮನ ಸೆಳೆದ ಬಿ.ಕೆ ಹರಿ ಪ್ರಸಾದ್‌: ಶೇಖರ್ ಲಾಯಿಲ ನೀಡಿದ ಮನವಿಗೆ ಸ್ಪಂದನೆ

ಬೆಳ್ತಂಗಡಿ; ತಾಲೂಕಿನ ಬಾಂಜಾರು ಮಲೆಯಲ್ಲಿ ವಾಸಿಸುತ್ತಿರುವ 47 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಭೂ ಮಸೂದೆ ಕಾಯ್ದೆಯ ಅಡಿಯಲ್ಲಿ ಮಂಜೂರಾಗಿರುವ ಜಮೀನಿನ ವಿರುದ್ದ ರಾಜ್ಯ ಸರಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆಯುವಂತೆ ಹಿರಿಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ ವಿಧಾನ ಪರಿಷತ್ ನಲ್ಲಿ ಒತ್ತಾಯಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 47 ಕುಟುಂಬಗಳು ವಾಸಿಸುತ್ತಿದ್ದಾರೆ. ಯೆನೆಪೋಯ ಮೊಹಿದ್ದೀನ್ ಕುಂಞಿ ಅಂಡ್ ಕಂಪನಿ ಇವರಿಗೆ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದಲ್ಲಿ ಒಟ್ಟು 4,028 ಎಕರೆ ಜಮೀನನ್ನು ಹೊಂದಿದ್ದು ಇದರಲ್ಲಿ 368 ಎಕರೆ ಜಮೀನು ಹೆಚ್ಚುವರಿ ಜಮೀನು ಹೊಂದಿರುವುದಾಗಿ ಬೆಳ್ತಂಗಡಿ ಭೂನ್ಯಾಯ ಮಂಡಳಿ ತೀರ್ಪು ನೀಡಿರುತ್ತದೆ. ತೀರ್ಪಿನ ವಿರುದ್ಧ ಭೂಮಾಲೀಕರ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿರುವುದು ತಿಳಿದುಬಂದಿರುತ್ತದೆ. ತದನಂತರದಲ್ಲಿ ಸರ್ಕಾರ ರಿಟ್ ಪಿಟಿಷನ್ ಆದೇಶದ ವಿರುದ್ಧ ರಿವ್ಯೂ ಪಿಟಿಷನ್ ಸಲ್ಲಿಸಿ ಹೈಕೋರ್ಟ್‌ನಲ್ಲಿ ತಿರಸ್ಕೃತವಾದ ಕಾರಣ ಸುರ್ಪೀಂಕೋರ್ಟ್‌ನಲ್ಲಿ ಸ್ಪೇಷಲ್ ಲೀವ್ ಪಿಟಿಷನ್ ದಾಖಲಿಸಿರುತ್ತದೆ.
ಕಂಪನಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯಂತೆ ಹೆಚ್ಚುವರಿ ಜಮೀನನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕಾಗಿರುವುದರಿಂದ ಗೇಣಿದಾರರಲ್ಲದ ತಮ್ಮದೇ ವಲಯದ 53 ಜನರಿಗೆ 537 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲಾಗಿರುತ್ತದೆ ಎನ್ನುವುದು ಸರ್ಕಾರದ ವಾದವಾಗಿದ್ದು ಭೂ ನ್ಯಾಯ ಮಂಡಳಿಯಿಂದ ಮಂಜೂರಾಗಿರುವ ಜಮೀನನ್ನು ರದ್ದುಗೊಳಿಸಲು ಪ್ರಯತ್ನ ನಡೆಸಿರುತ್ತದೆ. ಆದರೆ ಮಲೆಕುಡಿಯ ಜನಾಂಗ ವಾಸಿಸುವ ಬಂಜಾರು ಮಲೆಕುಡಿಯು ಸಮುದಾಯ ಕಾಲೋನಿಯ 37 ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಈ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕೆಂದು ಶೂನ್ಯವೇಳೆಯಲ್ಲಿ ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಹರಿಪ್ರಸಾದ್ ಅವರಿಗೆ ಇತ್ತೀಚೆಗಷ್ಟೇ ಶೇಖರ್ ಲಾಯಿಲ ಮನವಿ ಸಲ್ಲಿಸಿದ್ದರು.

Related posts

ನ.9: ಎಸ್.ಕೆ. ಗೋಲ್ಡ್‌ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ

Suddi Udaya

ಯಾತ್ರಾರ್ಥಿಯಾಗಿ ಬಂದಿದ್ದ ವೃದ್ಧೆಗೆ ಜ್ಯೂಸ್ ನೀಡಿ ಚಿನ್ನಾಭರಣ ಎಗರಿಸಿದ ಅಪರಿಚಿತ

Suddi Udaya

ಬೆಳ್ತಂಗಡಿಯ ವಿನು ಬಳಂಜ ನಿರ್ದೆಶನದ ‘ಬೇರ’ ಚಲನಚಿತ್ರದ ಟೀಸರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಂದ ಬಿಡುಗಡೆ

Suddi Udaya

ಚಾರಣಕ್ಕೆ ಮೊಬೈಲ್ ಆ್ಯಪ್, ಗೈಡ್ ಕಡ್ಡಾಯ-ಚಾರಣಿಗರ ಸುರಕ್ಷತೆಗೆ ಮಾರ್ಗದರ್ಶಿ ಬಿಡುಗಡೆ

Suddi Udaya

ಉಜಿರೆಯ ಕಲ್ಲೆಯಲ್ಲಿ ಹಾಡುಗಲೇ ಲಕ್ಷಾಂತರ ಮೌಲ್ಯದ ನಗದು ಸಹಿತ ಚಿನ್ನಾಭರಣ ಕಳವು ಪ್ರಕರಣ: ಮೈಸೂರು ಜಿಲ್ಲೆಯ ಝೂ ಪಾರ್ಕ್‌ನಲ್ಲಿ ಆರೋಪಿಯನ್ನು ಸೆರೆ ಹಿಡಿದ ಪೊಲೀಸರು: ಮೈಸೂರು ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿದ್ದ ಚಿನ್ನಭರಣ ವಶ: ಬೆಳ್ತಂಗಡಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Suddi Udaya

ಮಡಂತ್ಯಾರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

Suddi Udaya
error: Content is protected !!