26.1 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಚಾರ್ಮಾಡಿ : ಅನ್ನಾರ್ ನದಿಯ ಸೇತುವೆಯ ಅಡಿಯಲ್ಲಿ ದನದ ತಲೆ ಸೇರಿದಂತೆ ಅವಶೇಷಗಳು ಪತ್ತೆ

ಚಾರ್ಮಾಡಿ : ಚಾರ್ಮಾಡಿ ಬಳಿಯ ನದಿಯ ಸೇತುವೆ ಕೆಳಗೆ ದನದ ತಲೆ ಸೇರಿದಂತೆ ಅವಶೇಷಗಳು ಸುಮಾರು ಹನ್ನೊಂದು ಗೋಣಿ ಚೀಲದಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ನದಿಯ ಸೇತುವೆ ಅಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟ ರೀತಿಯಲ್ಲಿ ದನದ ತಲೆ, ಚರ್ಮ, ಹಾಗೂ ಇತರ ಅವಶೇಷಗಳು ಪತ್ತೆಯಾಗಿದ್ದು, ಯಾರೋ ಅಕ್ರಮವಾಗಿ ಎಲ್ಲೊ ದನದ ಮಾಂಸ ತಯಾರಿಸಿ ಉಳಿದ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಇಲ್ಲಿ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Related posts

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಶಿಬಾಜೆ: ಕಟ್ಟಿಗೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆ

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಈ ವರ್ಷದ 150ನೇ ಪ್ರದರ್ಶನ ಸಂಭ್ರಮ

Suddi Udaya

ಇಳಂತಿಲ: ಅಮಲು ಸೇವನೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya
error: Content is protected !!