23.5 C
ಪುತ್ತೂರು, ಬೆಳ್ತಂಗಡಿ
January 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛತಾ ಕಾರ್ಯ

ಬೆಳ್ತಂಗಡ: ಶ್ರೀ ಡಿ ದೇವರಾಜ ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಕೇಂದ್ರ ಸ್ಥಾನ ಇಲ್ಲಿಯ ವಿದ್ಯಾರ್ಥಿನಿಯರು ಡಿ. 15 ರಂದು ವಿದ್ಯಾರ್ಥಿ ನಿಲಯದಿಂದ ರೆಂಕೆದ ಗುತ್ತು ರಿಕ್ಷಾ ತಂಗದಾನದವರೆಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಲಯದ ನಿಲಯಪಾಲಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಹಿರಿಯರು ನೀಡಿದ ಸುಂದರ ಸ್ವಚ್ಛ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ಸುಂದರವಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಯೋಚನೆಯು ಪ್ರತಿಯೊಬ್ಬ ಯುವಕ ಯುವತಿಯರಲ್ಲಿ ಮೂಡುವುದು ಬಹಳ ಮುಖ್ಯ. ಯುವಜನರಾದ ನಾವುಗಳು ನಮ್ಮ ಸ್ವಚ್ಛ ಸಮಾಜದ ಅಗತ್ಯವನ್ನು ತಿಳಿದು ಸ್ವಚ್ಛತೆಯಲ್ಲಿ ಕೈ ಜೋಡಿಸಬೇಕು ಮತ್ತು ಈ ಸ್ವಚ್ಛತೆ ಕಾರ್ಯ ತನಗೆಂದು ಭಾವಿಸದೆ ತನ್ನ ಸಮಾಜಕ್ಕೆಂದು ಭಾವಿಸಬೇಕು. ಹಾಗಾಗಿ ನಮ್ಮ ಈ ಪುಟ್ಟ ಸೇವೆ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಕಾರಣಕ್ಕಾಗಿ ನಮ್ಮ ಬಿಡುವಿನ ಸಮಯವನ್ನು ಈ ಅಳಿಲು ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಡಿ ದೇವರಾಜ ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಕೇಂದ್ರ ಸ್ಥಾನದ ವಿದ್ಯಾರ್ಥಿ ಪ್ರತಿನಿಧಿ ಉಷಾ ತೃತಿಯ ಬಿಎ ಎಸ್. ಡಿ. ಎಂ. ಕಾಲೇಜು ಉಜಿರೆ ಸ್ವಚ್ಛತಾ ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ನಿಲಯದ ನಿಲಯ ಪಾಲಕರದ ಶಶಿಕಲಾ ರವರು ಈ ಪರಿಸರ ನಮ್ಮ ವೈಯಕ್ತಿಕ ಆಸ್ತಿಯಲ್ಲ, ಪ್ರತಿಯೊಬ್ಬರ ಆಸ್ತಿ. ಸಮಾಜ ಸ್ವಚ್ಛವಾಗಿದ್ದಾಗ ಮಾತ್ರ ಸಮಾಜದಲ್ಲಿ ಇರುವ ಜನರ ಮನಸ್ಸು ಸ್ವಚ್ಛವಾಗಿ ಇರುತ್ತದೆ. ಸ್ವಚ್ಛತೆ ಕಾರ್ಯಕ್ರಮಗಳು ಎಂಬುದು ಕೇವಲ ಆಡಂಬರಕ್ಕೆ ಮೀಸಲಾಗದೆ ನಮ್ಮ ವೈಯಕ್ತಿಕ ಸ್ವಚ್ಛತೆಗೆಂದು ನಾಗರಿಕರು ಮತ್ತು ವಿದ್ಯಾರ್ಥಿಗಳು ಭಾವಿಸುವುದು ಅಗತ್ಯ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪರಿಸರ ರಕ್ಷಕರು ಎಂಬುದು ವಿದ್ಯಾರ್ಥಿಗಳಲ್ಲಿ ಮನವರಿಕೆ ಆಗಬೇಕು ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ವಚ್ಛ ಭಾರತದ ನಿರ್ಮಾಣಗಳಲ್ಲಿ ಕೈ ಜೋಡಿಸಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ನಗರ ಪಂಚಾಯಿತಿಯ ಅಧ್ಯಕ್ಷ ಜಯಾನಂದ ಧನ್ಯವಾದ ತಿಳಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಕೈಜೋಡಿಸಿದ್ದರು.

Related posts

ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀರಾಮ ಕ್ಷೇತ್ರ, ಕಾಜೂರು ದಗಾ೯ಕ್ಕೆ ಭೇಟಿ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸಂಜಯನಗರ ನಿವಾಸಿ ಅಬ್ದುಲ್ ರಹಿಮಾನ್ ಹೃದಯಾಘಾತದಿಂದ ನಿಧನ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

Suddi Udaya

ಜು.27: ದ.ಕ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ “ಮ್ಯಾನೇಜ್ಮೆಂಟ್ ಫೆಸ್ಟ್ “

Suddi Udaya
error: Content is protected !!