ಮಚ್ಚಿನ : ಸಪರಿವಾರ ಶ್ರೀ ಶಾಸ್ತಾರ ದೇವಸ್ತಾನ ಜೀರ್ಣೋದ್ಧಾರ ಗೊಳ್ಳುತ್ತಿರುವ ಸಹಸ್ರಮಾನದ ಇತಿಹಾಸವಿರುವ ಬಹಳ ಪ್ರಾಚೀನ ಕಾಲದ ಪುಣ್ಯತಮವಾದ ಮಚ್ಚಿನ ಗ್ರಾಮದ ಮಾಣೂರು ಶ್ರೀ ಸಾಸ್ತಾರ ದೇವಸ್ಥಾನಕ್ಕೆ ಸಕಲ ಪ್ರಾಯಶ್ಚಿತ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಕ್ಷೇತ್ರದ ದೈವಜ್ಞರಾದ ವೇದಮೂರ್ತಿ ಬ್ರಹ್ಮ ಶ್ರೀ ವೆಂಕಟ್ರಮಣ ಜೋಯಿಸರ ಮಾರ್ಗದರ್ಶನದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಪರಕ್ಕಜೆ ಅನಂತನಾರಾಯಣ ಭಟ್ಟರ ಆಚಾರ್ಯತ್ವದಲ್ಲಿ ದೇವತಾ ಪ್ರಾರ್ಥನೆ ಪುಣ್ಯ ವಾಚನ. ಪ್ರಸಾದ ಸುದ್ದಿ. ರಕ್ಷೋಷ್ನ ಹೋಮ. ವಾಸ್ತು ಹೋಮ ವಾಸ್ತು ಪೂಜೆ ವಾಸ್ತು ಬಲಿ ಕಳಸ ಪ್ರತಿಷ್ಠೆ ಆದಿವಾಸಗಳು ಅನುಜ್ಞಾ ಪ್ರಾರ್ಥನೆ. ಸಂಕೋಚ ಪ್ರಕ್ರಿಯೆಗಳು ಅನುಜ್ಞಾ ಕಲಶಾಭಿಷೇಕ ಸಹಿತ ಬಾಲಾಲಯ ದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಕಾರ್ಯಕ್ರಮ ಡಿ14 ಮತ್ತು15 ರoದು ಜರಗಿತು.
ದೇವಸ್ಥಾನದ ಅರ್ಚಕರು ರಾಮಚಂದ್ರ ಭಟ್. ಪವಿತ್ರ ಪಾಣಿ ಕೃಷ್ಣ ಭಟ್. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮತ್ತು ಸದಸ್ಯರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹೊನ್ನಪ್ಪ ಕುಲಾಲ್ ಮಾಣೂರು ಮತ್ತು ಸದಸ್ಯರು ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು ಹರ್ಷ ಸಂಪಿಗೆತ್ತಾಯ ಗ್ರಾಮದ ಸ್ಥಳೀಯ ಪ್ರಮುಖರು ಭಕ್ತಾದಿಗಳು ಉಪಸ್ಥಿತರಿದ್ದರು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರಗಿತು