21.5 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಹಾಸನ ಮೂಲದ ವ್ಯಕ್ತಿ ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ: ಜೀವ ಉಳಿಸಿದ ಪೊಲೀಸರು

ಚಾರ್ಮಾಡಿ: ಚಾರ್ಮಾಡಿ ಘಾಟಿಯ ಏಕಲವ್ಯ ಶಾಲೆಯ ಅಣಿ ದೂರದಲ್ಲಿ ಹಾಸನ ಮೂಲದ ವ್ಯಕ್ತಿಯೋರ್ವ ಹರಿತದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಡಿ.16 ರಂದು ಸಂಜೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆದರೆ 112 ಸಂಚಾರಿ ಪೊಲೀಸರು ವ್ಯಕ್ತಿ ಹಾಸನ ಮೂಲದ ಮನು ಎಂಬುವರನ್ನು ರಕ್ಷಿಸಿ ಉಳಿಸಿದ್ದಾರೆ.ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಅಣಿ ಅಂತರದಲ್ಲಿ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸ್ ಆಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ. ಆದರೆ ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ 112 ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ವ್ಯಕ್ತಿಯಿಂದ ಹರಿತವಾದ ಬ್ಲೇಡ್ ಕಸಿದು ಹರಸಾಹಸ ಪಟ್ಟು ಆತನನ್ನು ಹಿಡಿದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದ್ದಾರೆ.

ಬಳಿಕ ಅವರ ಪತ್ನಿಗೆ ಕರೆ ಮಾಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಿ ಎಸ್.ಅಭಿಷೇಕ್, ದಿಲೀಪ್, ಸುಂಕ ಬೋವಿ, ಓಂಕಾರ ನಾಯ್ಕ್ ಭಾಗವಹಿಸಿದ್ದರು.ಪೊಲೀಸರ ಕ್ಷಿಪ್ರವಾದ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.

Related posts

ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು

Suddi Udaya

ವಾಣಿ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಇಂಜಿನಿಯರ್ ಗಳಿಗೆ ಜಯನಂದ ಗೌಡ ಮನವಿ

Suddi Udaya

ಬಳಂಜ ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಪರಿವಾರ ಶಕ್ತಿಗಳ ಕ್ಷೇತ್ರ ಬೊಂಟ್ರೋಟ್ಟುಗುತ್ತು ಬಳಂಜ ಡಿ.28-31 ಮಹಾಚಂಡಿಕಾಯಾಗ,ದೈವಗಳ ಪ್ರತಿಷ್ಠಾ ಕಲಶಾಭಿಷೇಕ, ನೇಮೋತ್ಸವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

Suddi Udaya

ಎಸ್.ಡಿ.ಎಮ್ ಕಾಲೇಜಿನಲ್ಲಿ ಆಂಗ್ಲ ವಿಭಾಗದಿಂದ ಅಧ್ಯಯನ ವಿನಿಮಯ ಕಾರ್ಯಕ್ರಮ 

Suddi Udaya

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‌ಲೈನ್ ಮೂಲಕ ಬುಕಿಂಗ್

Suddi Udaya
error: Content is protected !!