ಬೆಳ್ತಂಗಡಿ :ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.) , ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನವು ಪ್ರಕೃತಿಯ ಮಡಿಲಿನಲ್ಲಿರುವ ನರಸಿಂಹ ಘಢ ದ(ಗಡಾಯಿಕಲ್ಲಿನ) ತಪ್ಪಲು ಬಲಿಪ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ಅಧಿವೇಶನವನ್ನು ಸುಮಾರು 20 ವರ್ಷಗಳ ಕಾಲ ವಾಯುಸೇನೆಯಲ್ಲಿದ್ದು ದೇಶದ ರಕ್ಷಣೆಗೈದು, ಬಳಿಕ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ , ಉಡುಪಿ,ದ.ಕ. ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ ನಿವೃತ್ತರಾಗಿರುವ ಶ್ರೀ ಕುಮಾರ ಸ್ವಾಮಿ ಎ.ಯವರು ಡಿ. 22ರಂದು ಉದ್ಘಾಟಿಸಲಿದ್ದಾರೆ.ಎಂದು
ಈ ಅಧಿವೇಶನವನ್ನು ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯು ಆಯೋಜಿದ್ದು, ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಕುಳಮರ್ವ,ರವರು ಡಿ. 17ರಂದು
ಪತ್ರಿಕಾ ಭವನದಲ್ಲಿ ಪತ್ರಿಗೋ ಷ್ಠಿ ಉದ್ದೇಶಿಸಿ ಮಾತನಾಡಿದರು
ಈ ಸಂದರ್ಭದಲ್ಲಿ
ಕಾರ್ಯದರ್ಶಿಯಾಗಿ ಶ್ರೀಮತಿ ಸುಭಾಷಿಣಿ, ಉಪಾಧ್ಯಕ್ಷರಾಗಿ ಶ್ರೀ.ವಿಶ್ವೇಶ್ವರ ಭಟ್ ಉಂಡೆಮನೆ ಮತ್ತು ಶ್ರೀ.ರಾಮಕೃಷ್ಣ ಭಟ್ ಬದನಾಜೆ. ಉಪಸ್ಥಿದ್ದರು
ಕೋಶಾಧಿಕಾರಿ ಕೇಶವ ಭಟ್ ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿನುತಾ ರಜತ್ ಗೌಡ ಮತ್ತು ಶ್ರೀ.ನಾರಾಯಣ ಫಡ್ಕೆ. ಮಾಧ್ಯಮ ಪ್ರಮುಖ್ ಆಗಿ ಶ್ರೀ.ಶ್ರೀನಿವಾಸ್ ತಂತ್ರಿ. ಸಾಹಿತ್ಯ ಕೂಟ ಪ್ರಮುಖ್ ಆಗಿ ಶ್ರೀ.ರಾಮಕೃಷ್ಣ ಭಟ್ ಬೆಳಾಲು. ವಿದ್ಯಾರ್ಥಿ ಪ್ರಕಾರ ಪ್ರಮುಖ್ ಆಗಿ ಶ್ರೀ ಮಹಾಬಲ ಗೌಡ. ಮಕ್ಕಳ ಪ್ರಕಾರ ಪ್ರಮುಖ್ ಆಗಿ ಶ್ರೀಮತಿ ಮೇಧಾ. ಮಹಿಳಾ ಪ್ರಕಾರ ಪ್ರಮುಖ್ ಆಗಿ ವಿದ್ಯಾಶ್ರೀ ಅಡೂರು . ಕಾರ್ಯಕಾರಿಣಿ ಸದಸ್ಯರಾಗಿ ಶ್ರೀ.ಗುರುನಾಥ್ ಪ್ರಭು, ಡಾ//ಪ್ರದೀಪ್ ನಾವುರ ಮತ್ತು ಶ್ರೀಮತಿ ವನಜಾ ಜೋಷಿಯವರು ಜವಾಬ್ಧಾರಿಯನ್ನು ನಿರ್ವಹಿಸುತ್ತಾ ಇದ್ದಾರೆ. 2017 ರಲ್ಲಿ ಅಭಾಸಾಪ ಸಮಿತಿಯು ಬೆಳ್ತಂಗಡಿಯಲ್ಲಿ ಆರಂಭಗೊಂಡು ಸಾಹಿತ್ಯದಲ್ಲಿ ಭಾರತೀಯತೆಯನ್ನು ಸ್ಥಾಪಿಸುವ, ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಪ್ರಯತ್ನವಾಗಿ ತಾಲೂಕಿನಲ್ಲಿ ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಗಟ್ಟಿ ಹೆಜ್ಜೆಯಾಗಿ ಈ ಅಧಿವೇಶನವು ಸಾಕ್ಷಿಯಾಗಲಿದೆ.
ಈ ಕಾರ್ಯಕ್ರಮದಲ್ಲಿ ಎರಡು ಉಪನ್ಯಾಸಗಳಿದ್ದು ಒಂದು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಎನ್ನುವ ವಿಷಯದಲ್ಲಿ ಯಕ್ಷಗಾನ ಕವಿಗಳೂ..ಅರ್ಥದಾರಿಗಳೂ ಆಗಿರುವ ಶ್ರೀ ದಿವಾಕರ ಹೆಗಡೆಯವರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದೊಲವು ಎನ್ನುವ ವಿಷಯವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿಯವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕು ಹಾಗು ಜಿಲ್ಲೆಯ ಹೆಸರಾಂತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ.
ಒಂದು ಅವಧಿಯು ಕವಿ ಸಮ್ಮಿಲನವಾಗಿದ್ದು ಇದರ ಅಧ್ಯಕ್ಷತೆಯನ್ನು ಕವಯಿತ್ರಿ, ತುಳು ಲಿಪಿ ಶಿಕ್ಷಕಿ, ತುಳುವೆರೆ ಕಲದ ಅಧ್ಯಕ್ಷೆ, ಶ್ರೀಮತಿ ಗೀತಾ ಲಕ್ಷ್ಮೀಶ್‌ರವರು ವಹಿಸಿಕೊಳ್ಳಲಿದ್ದಾರೆ. ಇದರ ಭಾಗವಾಗಿ ತಾಲೂಕಿನ ಕವಿಗಳಾದ ಅಶ್ವಿಜ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಅಡೂರು, ವನಜಾ ಜೋಷಿ, ನಿಶಾ ಸಂತೋಷ್, ನಯನಾ ಟಿ., ಸಮ್ಯಕ್ತ್ ಜೈನ್, ವಿದ್ಯಾಶ್ರೀ ಅಡೂರು, ಸುಶಾಂತ್, ನಾಗಶ್ರೀ ದಾತೆ, ಸೋನಾಕ್ಷಿ, ವೃಂದಾ ತಾಮಣ್ಕರ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.
ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯು ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರೇರಕ ಶಕ್ತಿಯಾಗಿ ನಿಂತು ಶ್ರೀಮತಿ ಶಾಂತಾ ಜೆ.ಅಳದಂಗಡಿಯವರ ಸ್ವರಚಿತ ಕವನಗಳ ಸಂಕಲನ ಕಾವ್ಯ ಯಾನ
ಶ್ರೀಮತಿ ವಿನುತಾ ರಜತ್ ಗೌಡರವರ ಲೇಖನಗಳ ಗೊಂಚಲು ಪ್ರತಿಬಿಂಬ
ಹಾಗು ವಿದ್ಯಾರ್ಥಿಗಳು ಮತ್ತು ಹೊಸ ಬರಹಗಾರರಿಂದ ರಚಿಸಲ್ಪಟ್ಟ ಕವನಗಳ ಸಂಕಲನ ಮೊದಲ ಹೆಜ್ಜೆ ಈ ಮೂರು ಚೊಚ್ಚಲ ಕೃತಿಗಳನ್ನು ಲೋಕಾರ್ಪಣೆಗೊ ಳಿಸುತ್ತಿದೆ. ಈ ಹೊತ್ತಿಗೆಯು ಮನುಷ್ಯ ಸಂವೆದನೆ, ಪರಿಸರ ಪ್ರಜ್ಞೆ, ಮಾತೃ ವಾತ್ಸಲ್ಯ, ತಾಯ್ನೆಲ , ವಾಸ್ತವ ಚಿತ್ರಣಗಳನ್ನು ಒಳಗೊಂಡ ವಿಷಯ ವಸ್ತುಗಳನ್ನು ಹೊಂದಿದೆ. ಸಾಮಾಜಿಕ ಕಳಕಳಿ ಹೊಂದಿರುವ ಸಂಪನ್ಮೂಲ ವ್ಯಕ್ತಿ ಶ್ರೀ.ಪ್ರಕಾಶ್ ಶೆಟ್ಟಿ ನೊಚ್ಚರವರು ಈ ಮೂರು ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ.
ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮವು ಕೂಡ ನಡೆಯಲಿದ್ದು, ಕಾರ್ಯಕ್ರಮದ ಸಮಾರೋಪವನ್ನು ಲೇಖಕರೂ, ಅಂಕಣಕಾರರೂ ಆಗಿರುವ ಶ್ರೀ. ಶಿವಪ್ರಸಾದ್ ಸುರ್ಯರವರು ಮಾಡಲಿದ್ದಾರೆ.