ಬೆಳ್ತಂಗಡಿ : ಜೆಪಿ ಅಟ್ಟಾಕ್ರ್ಸ್ ಇದರ ಪ್ರಾಯೋಜಕತ್ವದಲ್ಲಿ 8+1 ಜನರ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಡಿ. 15ರಂದು ಬೆಳ್ತಂಗಡಿ ಮೆಸ್ಕಾಂ ರಸ್ತೆ ಬೊಟ್ಟುಗುಡ್ಡೆ ಮೈದಾನದಲ್ಲಿ ನಡೆಯಿತು.
ಬೆಳ್ತಂಗಡಿ ಎಸ್ ಎಮ್ ಎಸ್ ರೆಕ್ಸಿನ್ ಮಾಲೀಕರಾದ ಚಿದಾನಂದ ಪಂದ್ಯಾಟವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುದ್ದಿ ಉದಯ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ತುಕಾರಾಮ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಕ ಸತೀಶ್ ದೊಡ್ಡಮನೆ, ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ, ತೀರ್ಪುಗಾರರಾದ ಗೋಪಾಲ್ ಕೆಸಿ ಎಂಟರ್ಪ್ರೈಸಸ್ ಮಾಲಕರಾದ ಮನು , ಜೆಪಿ ಅಟ್ಯಾಕ್ರ್ ತಂಡದ ಮಾಲಕ ಕರುಣಾಕರ ಉಪಸ್ಥಿತರಿದ್ದರು.
ಈ ವೇಳೆ ಪ್ರಥಮ ಸ್ಥಾನವನ್ನು ರೂ 8001 ಹಾಗೂ ಜೆಪಿ ಟ್ರೋಪಿಯನ್ನು ಬ್ರಹ್ಮಶ್ರೀ ಕುವೆಟ್ಟು, ದ್ವಿತೀಯ ಸ್ಥಾನವನ್ನು ರೂ. 6001 ಜೆ. ಪಿ ಟ್ರೋಫಿ 7 ಸ್ಟಾರ್ ಬೆಳಾಲು ಪಡೆದುಕೊಂಡಿತ್ತು.