23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ 9 ನೇ ತರಗತಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ: ವಿದ್ಯಾರ್ಥಿಯೊಬ್ಬ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ಬೆಳಗ್ಗೆ ನಡೆದಿದೆ.

ತೆಂಕಕಾರಂದೂರು ಪೆರೋಡಿತ್ತಾಯಕಟ್ಟೆ ಶಾಲಾ ಬಳಿಯ ಮನೆಯ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸ್ಟೀಫನ್ ಸ್ಟ್ಯಾನ್ಲಿ ಡಿಸೋಜ (14) ಕ್ರಿಸ್ ಮಸ್ ಪ್ರಯುಕ್ತ ಇಂದು ಸಂಜೆ ಮನೆಗೆ ಸಾಂತಕ್ಲಾಸ್ ಬರುವ ಹಿನ್ನೆಲೆಯಲ್ಲಿ ಗೋದಳಿಗೆ ಲೈಟಿಂಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿದೆ .

ತಕ್ಷಣ ಆತನ ಅಜ್ಜಿ ಹಾಗೂ ದೊಡ್ಡಪ್ಪ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಆವಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಾಲಕನ ತಂದೆ ತಾಯಿ ಎರಡು ವರ್ಷದ ಹಿಂದೆ ಮೃತ ಪಟ್ಟಿರುತ್ತಾರೆ. ತಮ್ಮ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ .

ಸ್ಥಳಕ್ಕೆ ವೇಣೂರು ಠಾಣಾ ಧಿಕಾರಿ ಶ್ರೀ ಶೈಲಾ , ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ಕ್ಲೇಮೆಂಟ್ ಬ್ರಗ್ಸ್ ಘಟನಾ ಸ್ಥಳ ಕ್ಕೆ ಭೇಟಿ ನೀಡಿದರು,

Related posts

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಅವಿರೋಧ ಆಯ್ಕೆ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು : ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

Suddi Udaya

ಮಲೆಬೆಟ್ಟು ಹಾ.ಉ.ಸಂ. ನಿರ್ದೇಶಕ ಪ್ರವೀಣ್ ಪೂಜಾರಿ ಬಿಜೆಪಿ ಸೇರ್ಪಡೆ

Suddi Udaya

ಶಿಶಿಲ: ಪೇರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

Suddi Udaya

ಮಡಂತ್ಯಾರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ವಿವಿಧ ಸಮಿತಿಯಿಂದ ಸತ್ಯ ನಾರಾಯಣ ಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಉಚಿತ ವೈದ್ಯಕೀಯ ದಂತ ಚಿಕಿತ್ಸೆ ಶಿಬಿರ

Suddi Udaya
error: Content is protected !!