23.2 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ರೋಟರಿ ಕ್ಲಬ್ ವಿದ್ಯಾರ್ಥಿಗಳಿಗೆ ರೂ. 25.5 ಲಕ್ಷ ಸ್ಕಾಲರ್ ಶಿಫ್ ನೀಡಿ ರೋಟರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ: ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಗವರ್ನರ್ ರೋ| ವಿಕ್ರಂ ದತ್ತಾ ಪ್ರಶಂಸೆ

ಬೆಳ್ತಂಗಡಿ : ಬೆಳ್ತಂಗಡಿ ರೋಟರಿ ಕ್ಲಬ್ ಸಮುದಾಯ ಸೇವೆಗಳಡಿಯಲ್ಲಿ 100ಕ್ಕೂ ಹೆಚ್ಚು ಸಮುದಾಯ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು,. ರಕ್ತದಾನ ಶಿಬಿರಗಳ ಮೂಲಕ 850 ಕ್ಕೂ ಅಧಿಕ ಯೂನಿಟ್‌ ರಕ್ತ ಸಂಗ್ರಹಿಸಲಾಗಿದೆ. ಜೊತೆಗೆ ಜೀವರಕ್ಷಕ್ ಕಾರ್ಯಕ್ರಮದ ಮೂಲಕ ಅಗತ್ಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿದ್ದ ರೋಗಿಗಳಿಗೆ ರಕ್ತ ಒದಗಿಸಿಕೊಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ರೂ.25.5 ಲಕ್ಷ ಮೌಲ್ಯದ ಸ್ಕಾಲರ್ ಶಿಫ್ ನೀಡಿ ರೋಟರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿಯಲ್ಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೋ| ವಿಕ್ರಂ ದತ್ತಾ ಹೇಳಿದರು.

ಅವರು ಬೆಳ್ತಂಗಡಿ ರೋಟರಿ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರೋಟರಿ ಕ್ಲಬ್ ಗೆ 119 ವಷ೯ಗಳ ಇತಿಹಾಸವಿದ್ದು, ವಿಶ್ವದ 197 ದೇಶಗಳಲ್ಲಿ ಕ್ಲಬ್ ಇದೆ. 11.50 ಲಕ್ಷ ಸದಸ್ಯರು ಇದ್ದಾರೆ. ರೋಟರಿ ಜಿಲ್ಲೆಯಲ್ಲಿ 87 ಕ್ಲಬ್ ಗಳಿದ್ದು, 3751 ಸದಸ್ಯರು ಇದ್ದಾರೆ. ಬೆಳ್ತಂಗಡಿ ಕ್ಲಬ್ 53 ವಷ೯ಗಳಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳ ಲ್ಲಿ ಉತ್ತಮ ಕಾರ್ಯ ನಿರ್ವಹಿಸಿದೆ. ರೋಟರಿ ಜಿಲ್ಲೆಯಲ್ಲಿ 9 ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಮುಂದಿನ ಜ. 24, ಜ.25, ಜ.26 ರಂದು ಅಡ್ಯಾರ್ ನಲ್ಲಿ ರೋಟರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪೂರಣ್ ವಮ೯ ಮಾತನಾಡಿ, ಬೆಳ್ತಂಗಡಿ ರೋಟರಿ ಕ್ಲಬ್-ನ ಕಾರ್ಯವ್ಯಾಪ್ತಿಯಡಿಯಲ್ಲಿ ಕ್ಲಬ್ ಸೇವೆಗೆ ವಿಶಿಷ್ಟ ಪ್ರಾಶಸ್ತ್ಯ. ಇದರಡಿಯಲ್ಲಿ 25ಕ್ಕೂ ಹೆಚ್ಚು ವಾರದ ಸಭೆಗಳು ಮತ್ತು 3 ಮಂಡಳಿ ಸಭೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸದಸ್ಯರ ಜ್ಞಾನ ವೃದ್ಧಿ ಮಾಡಲಾಗಿದೆ. ಇದರೊಂದಿಗೆ ಕಂಪ್ಯೂಟರ್ ವಿತರಣೆ, ಉಚಿತ ಆರೋಗ್ಯ ಶಿಬಿರಗಳು ಹಾಗೂ ಯುವಜನರಲ್ಲಿ ಕೃಷಿ ಪ್ರೀತಿಯನ್ನು ಉತ್ತೇಜಿಸುವ ವಿಶಿಷ್ಟ ಯುವಸಿರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಬೀಜ ಬಿತ್ತನೆಯಿಂದ, ಬೆಳೆ ಕಟಾವು ಮಾಡಿ, ಭತ್ತ ಸಂಗ್ರಹಿಸುವವರೆಗೂ ಸುಮಾರು 700 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದು ವಿಶಿಷ್ಟ ದಾಖಲೆಯಾಗಿದೆ. ಜೊತೆಗೆ ಜಲನಿಧಿ, ಕೃಷಿ ನಿಧಿ ಕಾರ್ಯಕ್ರಮಗಳೂ ನಡೆಸಲಾಗಿದೆ. ಇದರೊಂದಿಗೆ 650ಕ್ಕೂ ಅಧಿಕ ಸಸಿ ವಿತರಣೆ ಮಾಡಿ ಪರಿಸರ ಕಾಳಜಿ ಮೆರೆಯಲಾಗಿದೆ. ಯಶೋಯಕ್ಷನಮನದ ಮೂಲಕ ಈ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಂಭ್ರಮಿಸಲಾಗಿದೆ. ಜೊತೆಗೆ ವಿವಿಧ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ.


( ಕರ್ನೋಡಿ & ಕಾಯರ್ತಡ್ಕ) ವೋಕೇಶನಲ್ ಸರ್ವಿಸ್ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ವಿವಿಧ ವಿದ್ಯಾರ್ಥಿಗಳಿಗೆ ನೆರವಾಗುವಂತೆ ನಾಯಕತ್ವ ತರಬೇತಿ, ಕೌಶಲ್ಯಾಭಿವೃದ್ಧಿ, ಕೋಚಿಂಗ್ ಮೊದಲಾದ ಸೇವೆಗಳನ್ನು ನೀಡಲಾಗಿದೆ. ಮಂಗಳೂರಿನ ಸೈಬರ್ ಹಾಗೂ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ ಕ್ರೈಮ್ಸ್ ವಿಭಾಗದ ಡಿವೈಎಸ್ಪಿ ಮಂಜುನಾಥ್ ಅವರ ಮೂಲಕ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಜೊತೆಗೆ ಮಹಿಳೆಯರ ಆರೋಗ್ಯ ಜಾಗೃತಿ ಮತ್ತು ನೈರ್ಮಲ್ಯ ಕಾರ್ಯಕ್ರಮವನ್ನೂ ನಡೆಸಲಾಗಿದೆ ಎಂದು ತಿಳಿಸಿದರು.
ಜಾಯಿಂಟ್ ಮೀಟಿಂಗ್, ಫ್ಲ್ಯಾಗ್ ಎಕ್ಸ್-ಚೇಂಜ್ ಮೀಟಿಂಗ್-ಗಳ ಜೊತೆಗೆ ಫನೋಥಾನ್ ಅನ್ನುವ ವಿಶಿಷ್ಟ ಪರಿಕಲ್ಪನೆಯಡಿಯಲ್ಲಿ ಸಭೆ ನಡೆಸಿದ ಹೆಮ್ಮೆ ನಮ್ಮದು.

ಸಂಭ್ರಮ ಮತ್ತು ಸ್ನೇಹದ ಸಂಕೇತವಾಗಿ ವಿಶೇಷವಾಗಿ ರಕ್ಷಾಬಂಧನ, ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಆಚರಣೆಗಳೂ ನಡೆದಿವೆ. ಇಂದಿನ ಮಕ್ಕಳನ್ನು ಮುಂದಿನ ರೊಟೇರಿಯನ್-ಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊತ್ತು, “ಬ್ರಿಂಗ್ ಯುವರ್ ಕಿಡ್ಸ್” ಅನ್ನುವ ವಿಶಿಷ್ಟ ಯೋಜನೆ ಜಾರಿ. ರೋಟರಿ ಸಭೆಯ ವೇಳೆ ರೊಟೇರಿಯನ್-ಗಳ ಮಕ್ಕಳ ನಡುವೆ ಸ್ನೇಹ-ಬಾಂಧವ್ಯ ವೃದ್ಧಿಗೆ ಕಾರಣವಾಗಿದೆ.

ಯೂತ್ ಸರ್ವಿಸ್ ನಡಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು ನಡೆದಿವೆ. ಇನ್ ಸ್ಪೈರ್ ಸಿರೀಸ್ ಅನ್ನುವ ಸರಣಿ ಕಾರ್ಯಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳ ಸಾಧಕರ ಜೊತೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಿ ಆ ಮೂಲಕ ಯುವಜನಾಂಗಕ್ಕೆ ಪ್ರೇರಣೆ ನೀಡಲಾಗಿದೆ. ಈ ವರ್ಷದ ವಿಶೇಷತೆ ಅನ್ನುವ ಹಾಗೆ ಜಿಲ್ಲಾ ಇಂಟರಾಕ್ಟ್ ಕಾನ್ಫರೆನ್ಸ್ ಆಯೋಜಿಸುವ ಸುವರ್ಣಾವಕಾಶ ನಮ್ಮ ಪಾಲಿಗೆ ಒದಗಿ ಬಂದಿತ್ತು. ಇದರಂಗವಾಗಿ ನಡೆಸಿದ ಯೂತ್ ಕಾರ್ನಿವಾಲ್-ಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದರು.

ಇಂಟರ್ ನ್ಯಾಷನಲ್ ಸರ್ವಿಸ್-ನಡಿಯಲ್ಲಿ ಪೊಲಿಯೋ ಫಂಡ್-ಗೆ ಎಲ್ಲಾ ಸದಸ್ಯರು ದೇಣಿಗೆ ನೀಡುವುದರ ಜೊತೆಗೆ ಭಿತ್ತಿಫಲಕಗಳ ಮೂಲಕ ಪೊಲಿಯೋ ಜಾಗೃತಿ ಮೂಡಿಸಲಾಗಿದೆ. ಇದರ ಜೊತೆಗೆ ಕಾಂಬೋಡಿಯಾ ಮತ್ತು ಜಪಾನ್ ವಿದ್ಯಾರ್ಥಿಗಳ ಜೊತೆಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ನಡೆಸಲಾಗಿದೆ.

ಮುಂದೆ ಇನ್ನಷ್ಟು ಶಾಲೆಗಳಲ್ಲಿ ಶೌಚಾಲಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ. ಅದರನ್ವಯ ಈಗಾಗಲೇ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.
ಬೆಳ್ತಂಗಡಿ ರೋಟರಿ ಕ್ಲಬ್-ನ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಕಲಶಪ್ರಾಯವೆಂಬಂತೆ, ನಮ್ಮ ಸಂಸ್ಥೆಯ ಗೌರವ ಸದಸ್ಯರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನವರಿ ಒಂದರಿಂದ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಯನ್ನು ಘೋಷಿಸಿದ್ದಾರೆ. ಈ ಮಹತ್ತರ ಸೇವೆಗೆ ಬೆಳ್ತಂಗಡಿ ರೋಟರಿ ಕ್ಲಬ್-ನ ಸರ್ವಸದಸ್ಯರು ಅವರಿಗೆ ಅಭಿವಂದನೆಗಳನ್ನು ಅರ್ಪಿಸುತ್ತದೆ ಎಂದು ಪೂರಣ್ ವಮ೯ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ , ಅಸಿಸ್ಟೆಂಟ್ ಗವರ್ನರ್ ರೋ| ಮೊಹಮ್ಮದ್ ವೊಳವೂರು, ವಲಯ ಸೇನಾನಿ ರೋ| ಮನೋರಮಾ ಭಟ್ , ಕಾಯ೯ದಶಿ೯ ಸಂದೇಶ್ ರಾವ್, ನಿಯೋಜಿತ ಅಧ್ಯಕ್ಷ ರೋ. ಪ್ರಕಾಶ್ ಪ್ರಭು, ಕಾಯ೯ದಶಿ೯ ಡಾ.ಎಂ.ಎಂ. ದಯಾಕರ್ ಉಪಸ್ಥಿತರಿದ್ದರು.

Related posts

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ‌ಯವರನ್ನು ಭೇಟಿ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ:ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳ ಕುರಿತು ಚರ್ಚೆ

Suddi Udaya

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

Suddi Udaya

ಪದ್ಮುಂಜ: ವಾಹನ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಆಚರಣೆ

Suddi Udaya

ನಾವೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ಗೌಡ ರವರ ಮನೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಪನ್ನ

Suddi Udaya
error: Content is protected !!