ಬೆಳ್ತಂಗಡಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್.ಎ.ಎಸ್.ಎಸ್) ವಿಶ್ವದ್ಯಾಂತ ಅಯ್ಯಪ್ಪ ಭಕ್ತರ ಸಂಘಟನೆಯಾಗಿದೆ. ೨೦೦೮ನೇ ಇಸವಿಯಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಸಾಸ್ ಸಂಘಟನೆ ಪ್ರಾರಂಭವಾಯಿತು. ನಂತರ ೨೦೧೫ ರಲ್ಲಿ ಕರ್ನಾಟಕ ರಾಜ್ಯದಲ್ಲಿ ಆರಂಭಗೊಂಡು ೨೦೧೯ ರಲ್ಲಿ ದ.ಕ ಜಿಲ್ಲಾ ಸಮಿತಿಯ ಮುಖಾಂತರ ಪ್ರತಿ ಜಿಲ್ಲೆಯಲ್ಲೂ ಪ್ರಾರಂಭಗೊಂಡಿತು. ಅಯ್ಯಪ್ಪನ ಸೇವೆಯ ಜೊತೆ ಶಬರಿಮಲೆಯ ಸಂರಕ್ಷಣೆಯ ಉದ್ದೇಶದಿಂದ ಪ್ರಾರಂಭಗೊಂಡ ಸಾಸ್ ಸಂಘಟನೆ ಸನಾತನ/ಅಯ್ಯಪ್ಪ ಧರ್ಮವನ್ನು ಸಂರಕ್ಷಣೆ ಮತ್ತು ಪ್ರಚಾರ ಮಾಡುತ್ತಾ ಜಾತಿ, ವರ್ಗ ಮತ್ತು ಭಾಷೆಯ ಅಡೆತಡೆಗಳನ್ನು ಮೀರಿ ಈ ಮೂಲಕ ಹಿಂದೂ ಏಕತೆ ಮತ್ತು ರಾಷ್ಟೀಯತೆ ಜಾಗೃತಿಗೆ ನಿರಂತರ ಶ್ರಮಿಸುತ್ತಿದೆ.
ವಿವಿಧ ರಾಜ್ಯಗಳಲ್ಲಿ ಹಲವು ಅನ್ನದಾನ ಕೇಂದ್ರಗಳು, ಅಯ್ಯಪ್ಪ ಸೇವಾ ಕೇಂದ್ರ (ಎ.ಎಸ್.ಕೆ) ಗಳು ಹಾಗೂ ಸುಮಾರು ೨೦,೦೦೦ ಸೇವಕರನ್ನು ಒಳಗೊಂಡಿದೆ. ಶಬರಿಮಲೆಯ ಪಾವಿತ್ರ್ಯತೆ ಆಚಾರ ವಿಚಾರ, ಸಂಪ್ರದಾಯದ ರಕ್ಷಣೆ. ಏರುಮಲೆ, ಪಂಪಾ ಮತ್ತು ಸನ್ನಿಧಾನದ ಶುಚಿತ್ವ. ದಾರಿಯುದ್ದಕ್ಕೂ ಅಯ್ಯಪ್ಪ ಭಕ್ತರಿಗೆ ತಂಗುದಾಣ, ಆಹಾರ, ಕುಡಿಯುವ ನೀರು, ಆರೋಗ್ಯ, ವಾಹನ ದುರಸ್ತಿ, ಮಾಹಿತಿ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಶ್ರಮಿಸುತ್ತಿವೆ. ಅಯ್ಯಪ್ಪ ವ್ರತಧಾರಿಗಳಿಗೆ ತೊಂದರೆ ಬಂದಾಗ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಪ್ರತಿಭಟನೆ, ಹೋರಾಟಗಳಲ್ಲಿ ಸಾಸ್ ಸದಾ ಮುಚೂಣಿಯಲ್ಲಿರುತ್ತದೆ ಎಂದರು.
ಸಾಸ್ ನ ಚಟುವಟಿಕೆಗಳು ವರ್ಷಪೂರ್ತಿ ಇರುತ್ತದೆ. ಕೇವಲ ಒಂದು ಮಂಡಲ, ಋತುವಿಗೆ ಸೀಮಿತವಾಗಿಲ್ಲ.
ಸಾಸ್ ದ.ಕ ಜಿಲ್ಲಾ ಸಮಿತಿಯು ತಾಲೂಕು ಸಮಿತಿ, ವಲಯ ಸಮಿತಿಗಳ ಮುಖಾಂತರ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ, ಸಂಘಟನಾತ್ಮಕ, ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತಕ ಪರಿಸ್ಥಿತಿಯಲ್ಲಿ ಪ್ರತಿ ಗ್ರಾಮಗಳಲ್ಲಿ ಅಯ್ಯಪ್ಪ ವ್ರತಧಾರಿಗಳ, ಭಕ್ತರ ಒಗ್ಗೂಡುವಿಕೆ ಅನಿವಾರ್ಯವಾಗಿದೆ. ಹಾಗಾಗಿ ತಾಲೂಕು ಮಟ್ಟದಲ್ಲಿ ಅಯ್ಯಪ್ಪ ವ್ರತಧಾರಿಗಳು ಮತ್ತು ಅಯ್ಯಪ್ಪ ಭಕ್ತರನ್ನು ಸೇರಿಸಿ ಸಂಘಟಾನತ್ಮಕವಾಗಿ ಬಲಿಷ್ಠಗೊಳ್ಳುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಡಿ.೨೪ ರಂದು ತಾಲೂಕು ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.