29.7 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಂಗಾಡಿ ಸ.ಪ್ರೌ. ಶಾಲೆಗೆ ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತ ಬಸವರಾಜ್ ಶಂಕರ್ ಉಮ್ರಾಣಿ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಗಣಿತದ ಅನರ್ಘ್ಯ ಪ್ರತಿಭೆ ರಾಷ್ಟ್ರಪತಿ ಪುರಸ್ಕೃತರಾದ ಬಸವರಾಜ್ ಶಂಕರ್ ಉಮ್ರಾಣಿ ಇವರು ಡಿ17,ರಂದು ಗ್ರಾಮೀಣ ಶಾಲೆಯಾದ ಸರಕಾರಿ ಪ್ರೌಢಶಾಲೆ ಬಂಗಾಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ನಾವು ಕಷ್ಟಕರ ಎಂದು ಭಾವಿಸುವ ಗಣಿತ ವಿಷಯವನ್ನು ಸುಲಭವಾಗಿ ಇಷ್ಟಪಟ್ಟು ಕಲಿಯುವ ಹಾಗೆ ಪ್ರೇರಣೆ ನೀಡಿದರು.

ಹುಟ್ಟು ಕುರುಡರಾಗಿರುವ ಇವರು ಒಂಭತ್ತು ಅಂಕಿಗಳಿರುವ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನವನ್ನು ಕ್ಷಣಾರ್ಧದಲ್ಲಿ ಯಾವುದೇ ತಂತ್ರಂಶಾಗಳ ಸಹಾಯವಿಲ್ಲದೇ ಮಾನಸಿಕ ಸಾಮರ್ಥ್ಯದಿಂದ ಬಿಡಿಸಿ ಉತ್ತರಿಸಿದ ರೀತಿ ಮಕ್ಕಳನ್ನು ಬೆರಗುಗೊಳಿಸಿತ್ತು. ಜನ್ಮ ದಿನಾಂಕ ಕೇಳಿಸಿಕೊಂಡು ಹುಟ್ಟಿದ ವಾರ ಹೇಳುವ ರೀತಿ ಅವಿಸ್ಮರಣೀಯ. ಎರಡಂಕ್ಕಿ ಮತ್ತು ಮೂರಂಕಿಗಳ ಗುಣಾಕಾರ ಕೋಷ್ಠಕವನ್ನು ಸರಾಗವಾಗಿ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಹೇಳುವ ಸಾಮರ್ಥ್ಯ ಎಲ್ಲರನ್ನು ಮೋಡಿ ಮಾಡಿತ್ತು. ಶಾಲಾ ಶಿಕ್ಷಕರಲ್ಲಿ ಮೂವತ್ತು ಅಂಕಿಗಳನ್ನು ಕರಿಹಲಗೆಯ ಮೇಲೆ ಬರೆಯಿಸಿ ಆ ಅಂಕಿಗಳನ್ನು ಆಲಿಸಿ ತಮ್ಮ ಸ್ಮರಣಶಕ್ತಿಯಿಂದ ಕ್ರಮಬದ್ಧ ರೀತಿಯಲ್ಲಿ ಪ್ರಥಮ ಅಂಕಿಯಿಂದ ಮೂವತ್ತನೇ ಅಂಕಿಯವರೆಗೆ ಮತ್ತು ಮೂವತ್ತನೇ ಅಂಕಿಯಿಂದ ಪ್ರಥಮ ಅಂಕಿಯವರೆಗೆ ತಿರುಗ ಮುರುಗ ಹೇಳಿದ ರೀತಿ ಕೇಳಿಸಿಕೊಂಡ ಎಲ್ಲರೂ ಆಶ್ಚರ್ಯಚಕಿತರಾದರು.

ಮೂರಂಕಿ ಸಂಖ್ಯೆಗಳ ಘನಗಳನ್ನು ಮತ್ತು ವರ್ಗ ಸಂಖ್ಯೆಗಳನ್ನು ಯಾವುದೇ ತಂತ್ರಾಂಶಗಳ ಸಹಾಯವಿಲ್ಲದೆ ಕ್ಷಣಾ ಗಳಿಗೆಯಲ್ಲಿ ಹೇಳುತ್ತಿದ್ದ ಸಾಮರ್ಥ್ಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾದರಿಯಂತಿತ್ತು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಹಾಗೊ ಶ್ರೀಧರ ಗುಡಿಗಾರರ ಮುತುವರ್ಜಿಯಿಂದ ಕಾರ್ಯಕ್ರಮವು ಜರುಗಿತು.

ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದವಿತ್ತರು.

Related posts

ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಆಚರಣೆ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಮೂರ್ಚೆ ರೋಗದಿಂದ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

Suddi Udaya

ಪ್ರತಿಭಾ ಕಾರಂಜಿ: ಬಜಿರೆ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಪ್ರಥಮ ಬಾರಿಗೆ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ಕುಣಿತ ಭಜನೆಯ ತರಬೇತಿದಾರರ ಸಂಘದ ಸಂಚಾಲಕರಾಗಿ ಪಿ ಚಂದ್ರಶೇಖರ್ ಸಾಲ್ಯಾನ್ ಆಯ್ಕೆ

Suddi Udaya

ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ

Suddi Udaya
error: Content is protected !!