ಮಚ್ಚಿನ: ಶಾಲೆ ಬಿಟ್ಟ ಕೂಡಲೇ ಕೆಲ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳಿಗೆ ಕೈ ಹಿಡಿದು ಯಾರಾದರೂ ವಾಹನ ನಿಲ್ಲಿಸಿದರೆ ಅದರಲ್ಲಿ ಹೋಗುತ್ತಿರುವುದು ಹಲವಡೆ ನಡೆಯುತ್ತಿದೆ. ಮಚ್ಚಿನ ಶಾಲೆಯಲ್ಲೂ ಶಾಲೆ ಬಿಡುವ ಸಮಯದಲ್ಲಿ ಶಾಲಾ ಮಕ್ಕಳು ರಸ್ತೆ ಬದಿಯಲ್ಲಿ ಉದ್ದಕ್ಕೆ ನಿಂತುಕೊಂಡು ಬೈಕ್ ಹಾಗೂ ಇತರ ವಾಹನಗಳಿಗೆ ಕೈ ತೋರಿಸಿ ಹತ್ತಿಕೊಂಡು ಹೋಗುವುದು ಇತ್ತೀಚಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಶಾಲೆ ಬಿಟ್ಟ ಕೂಡಲೇ ರಸ್ತೆ ಬದಿಯಲ್ಲಿ ನಿಂತು ಬೈಕ್ ಹಾಗೂ ಇತರ ದ್ವಿಚಕ್ರವಾಹನದಲ್ಲಿ ಒಬ್ಬರೇ ಹೋಗುತ್ತಿದ್ದರೆ ಅದಕ್ಕೆ ಮಕ್ಕಳು ಕೈ ಹಿಡಿದು ಬರುವುದಾಗಿ ತಿಳಿಸುತ್ತಾರೆ. ಕೆಲವರು ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಾರೆ. ಆದರೆ ಹೋಗುವಾಗ ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಜವಾಬ್ದಾರಿ ಯಾರು ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಹೋಗುವ ಬಗ್ಗೆ ಶಾಲೆಯವರು ಹಾಗೂ ಮಕ್ಕಳ ಪೋಷಕರು ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ವರದಿ: ಹರ್ಷ ಬಳ್ಳಮಂಜ