25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

ಬೆಳ್ತಂಗಡಿ : ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇಲ್ಲಿ ತಾಲೂಕಿನ ವಿಕಲಚೇತನ ಗುರುತಿನ ಚೀಟಿಯ ನವೀಕರಣ ಹಾಗೂ ಹೊಸ ವಿಕಲಚೇತನರ ಗುರುತಿಸುವ ಪ್ರಕ್ರಿಯೆಯನ್ನು ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ ಡಿ.17 ರಂದು ನಡೆಸಲಾಯಿತು.

ಶಿಬಿರವನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರು (MRW ) ಜೋನ್ ಬ್ಯಾಪಿಸ್ಟ್ ರವರ ಮಾರ್ಗದರ್ಶನದಲ್ಲಿ ನಡೆಸಲಾಯಿತು ಹಾಗೂ ಶಿಬಿರವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಿಕೊಳ್ಳಲು ತಾಲೂಕಿನ ನಗರ ಪುನರ್ವಸತಿ ಕಾರ್ಯಕರ್ತರು ನಗರ ಪಂಚಾಯತ್ ಬೆಳ್ತಂಗಡಿ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಗ್ರಾಮೀಣ ಪೂರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ, ತಾಲೂಕಿನ ಅನೇಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಲಾಯಿತು.

ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ವೈಧ್ಯರ ಮೂಲಕ ಹಾಗೂ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ತಾಲೂಕಿನ ಅನೇಕ ಬುದ್ಧಿಮಾಂದ್ಯ ಮತ್ತು ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಿ ಅವರಿಗೆ ಸಿಗಬೇಕಾದ ಸರ್ಕಾರ ಸೌಲಭ್ಯ ಯೋಜನೆಗಳನ್ನು ಪಡೆದುಕೊಳ್ಳಲು ಸಹಕಾರ ಆಗಲು ಯಶಸ್ವಿಯಾಗುವ ಮೂಲಕ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಮಾಡಿ ನೀಡಲಾಯಿತು.

Related posts

ಶಾಸಕ ಹರೀಶ್ ಪೂಂಜರಿಂದ ನೂತನ ಬಿಷಪ್‌ರಿಗೆ ಅಭಿನಂದನೆ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವಕ್ಕೆ ಮಾಜಿ ಶಾಸಕರಾದ ಪ್ರಭಾಕರ ಬಂಗೇರ ಭೇಟಿ

Suddi Udaya

ಬೆಳ್ತಂಗಡಿ: ರೆಂಕೆದಗುತ್ತುನಲ್ಲಿ ಆವರಣ ಗೋಡೆ ಬಿದ್ದು ಹಾನಿ

Suddi Udaya

ಲಾಯಿಲ: ಸೈಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಮುಳುಗುತಜ್ಞ ಕಾಂಜ ಧರ್ಮಸ್ಥಳ ನಿಧನ: ಧರ್ಮಸ್ಥಳ ಗ್ರಾಮ ಪಂಚಾಯತು ಸಂತಾಪ

Suddi Udaya

ಸಂಗೀತ ಜೂನಿಯರ್ ಪರೀಕ್ಷೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya
error: Content is protected !!