25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿ

ಬೆಳ್ತಂಗಡಿ : ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ: ಚಾಲಕ ಪರಾರಿ; ವಾಣಿಜ್ಯ ತೆರಿಗೆ ಇಲಾಖೆಯಿಂದ ಲಾರಿ ವಶಕ್ಕೆ

ಬೆಳ್ತಂಗಡಿ : ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ (ಗುಜರಿ) ಗಬ್ಬಿಣದ ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದು. ಈ ವೇಳೆ ಲಾರಿ ಚಾಲಕ ಚಿಕ್ಕಮಗಳೂರಿನ ರಾಜು.ಜಿ ಎಂಬಾತ ವಾಹನ ಬಿಟ್ಟು ಪರಾರಿಯಾಗಿದ್ದು ವಾಹನವನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬೆಳ್ತಂಗಡಿ ನಗರದ ಹಳೆಪೇಟೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ KA-18-C-5907 ಅಶೋಕ್ ಲೈಲ್ಯಾಂಡ್ ಕಂಪನಿಯ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನು (ಗುಜರಿ) ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಸಾಗಿಸುತ್ತಿದ್ದಾಗ ಡಿ.16 ರಂದು ರಾತ್ರಿ ಸುಮಾರು 9 ಗಂಟೆಗೆ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಅಯುಕ್ತ ಜಾರಿ-1 ಸತೀಶ್ ಬಟ್ವಾಡಿ ನೇತೃತ್ವದ ತಂಡ ಕರ್ತವ್ಯದಲ್ಲಿರುವಾಗ ತಡೆದು ನಿಲ್ಲಿಸಿ ಲಾರಿಯನ್ನು ತಪಾಸಣೆ ಮಾಡಿದಾಗ ದಾಖಲೆಗಳನ್ನು ನೀಡದೆ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು.

ಈ ವೇಳೆ ಸರಕಾರದ ಯಾವುದೇ ದಾಖಲೆಗಳು ಇಲ್ಲದೆ ಅಕ್ರಮ ಸಾಗಾಟ ಮಾಡಿರುವುದು ಪತ್ತೆಯಾಗಿರುತ್ತದೆ.ಲಾರಿಯನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿ ವಾಹನದ ಮಾಲೀಕರಿಗೆ ನೋಟಿಸ್ ನೀಡಿದ್ದು. ಈ ಬಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಪ್ರಕರಣ ದಾಖಲಾಯಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಎಂಜಿನಿಯರಿಂಗ್ ನಲ್ಲಿ ಅಳದಂಗಡಿಯ ಶ್ರೀಪ್ರಿಯಾಗೆ 7ನೇ ರ‌್ಯಾಂಕ್

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya

ಜೆಸಿಐ ಬೆಳ್ತಂಗಡಿಯ ಉದ್ದೇಶಿತ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಮಾ.22: ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮತ ಚಲಾವಣೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ಕನ್ನಡ ರಾಜ್ಯೋತ್ಸವ

Suddi Udaya
error: Content is protected !!