ಬೆಳ್ತಂಗಡಿ : ಪ್ರಜಾಪ್ರಭುತ್ವದ ದೇಗುಲವೆಂದೇ ಬಿಂಬಿತವಾದ ಶಾಸನ ಸಭೆಯ ಆವರಣದಲ್ಲೇ ಜನಪ್ರತಿನಿಧಿಯೊಬ್ಬರ ಮೇಲೆ ಗೂಂಡಾಗಳು ಮನಸೋಚ್ಚೆಯಿಂದ ನುಗ್ಗಿ ಹಲ್ಲೆಗೆ ಪ್ರಯತ್ನಿಸಿದ ಘಟನೆಯನ್ನು ಬೆಳ್ತಂಗಡಿ ಬಿಜೆಪಿ ಮಂಡಲ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನ ಪರಿಷತ್ತಿನೊಳಗೆ ಉಭಯ ಸದಸ್ಯರ ನಡುವೆ ನಡೆದ ಚಕಮಕಿಯನ್ನು ದಾಖಲೆಗಳನ್ನು ಪರಿಶೀಲಿಸಿ ಸಭಾಪತಿಗಳು ರೂಲಿಂಗ್ ನೀಡಿದ್ದರೂ, ಪೂರ್ವಾಗ್ರಹ ಪೀಡಿತರಾಗಿ ಶಾಸಕ ಸಿ.ಟಿ. ರವಿಯವರನ್ನು ಬಂದಿಸಿದ್ದು, ಕಾನೂನು ವ್ಯವಸ್ಥೆಗೆ ಮಾಡಿದ ಅಪಚಾರವೆಂದು ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.