ಉಜಿರೆ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ಬಿಜಿಎಸ್ ಸೌಹಾರ್ದ ಸಹಕಾರಿ ಸಂಘ ತೇಜಶ್ವಿ ಕಾಂಪ್ಲೆಕ್ಸ್ ಮೈಸೂರು ರಸ್ತೆ ಚನ್ನರಾಯಪಟ್ಟಣ ಹಾಸನ ಜಿಲ್ಲೆ ಇಲ್ಲಿಯ ಆಡಳಿತ ಮಂಡಳಿ ಸಹಕಾರಿಯ ಬಗ್ಗೆ ಅಧ್ಯಯನ ಮಾಡಲು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಬ್ಯಾಂಕಿನ ಅಧ್ಯಕ್ಷ ರಂಜನ್ ಜಿ ಗೌಡ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ದಿನೇಶ್ ಗೌಡ ಕಲ್ಲಾಜೆ ಇವರು ಸಹಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕ ಸಂಜೀವ ಗೌಡ ಪಾಂಚಜನ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿ.ಜಿ.ಎಸ್ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸಹಕಾರಿಯ ಬಗ್ಗೆ ಪ್ರಸಂಸೆಯ ಮಾತುಗಳನ್ನಾಡಿದರು. ಜೊತೆಗೆ ಬಿಜಿಎಸ್ ಸಹಕಾರಿಯವರು ಎಸ್ ಪಿ ಆಯಿಲ್ ಮಿಲ್ ಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡರು.