September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಶಿಬಿರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ ನಬಾರ್ಡ್ ಹಾಗೂ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಹಣಕಾಸು ಹಾಗೂ ಡಿಜಿಟಲ್ ಸಾಕ್ಷರತಾ ಶಿಬಿರವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಜೇಯ, ನಿರ್ದೇಶಕರು ರುಡ್ ಸೆಟ್ ಸಂಸ್ಥೆ ಉಜಿರೆ ಇವರು ಸ್ವ ಉದ್ಯೋಗ , ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಿಗುವ ಸಾಲಸೌಲಭ್ಯಗಳು , ಹಾಗೂ ರುಡ್ ಸೆಟ್ ಸಂಸ್ಥೆಯ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳ್ತಂಗಡಿ ಅಮೂಲ್ಯ ಹಣಕಾಸು ಸಾಕ್ಷರತಾ ಕೇಂದ್ರದ ಸಲಹೆಗಾರರು ಉಷಾ ನಾಯಕ್ ಮಾತನಾಡಿ , ಸೈಬರ್ ಭದ್ರತೆ, ವಿವಿಧ ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರದ ಸುರಕ್ಷತಾ ಕ್ರಮಗಳು, ಉಳಿತಾಯದ ಮಹತ್ವ , ಸಾಲದ ಶಿಸ್ತು ಹಾಗೂ ಹಣಕಾಸು ಭದ್ರತೆ, ಮತ್ತು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ (PMJJBY, PMSBY, APY) ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಹಾಗೂ ಸುರಕ್ಷಿತ ಡಿಜಿಟಲ್ ವ್ಯವಹಾರಗಳ ಕುರಿತು ಹೆಚ್ಚಿನ ಅರಿವು ಪಡೆದರು.

ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಗೌಡ, ಶ್ರೀಮತಿ ಚಂಪಾ, ಪ್ರಬಂಧಕರು ಕೆನರಾ ಬ್ಯಾಂಕ್ ಬೆಳ್ತಂಗಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪ್ರಕೃತಿ ಪಿ ವಿ ಸ್ವಾಗತಿಸಿ, ವರ್ಷಾ ಕೆ.ಪಿ. ನಿರೂಪಿಸಿದರು. ಶ್ರೇಯಸ್ ಆರ್. ರಾವ್ ವಂದಿಸಿದರು.

Related posts

ಬೆಳ್ತಂಗಡಿ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಗೆ ಪೂರ್ವಭಾವಿ ಸಭೆ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಮತದಾನ

Suddi Udaya

ಧರ್ಮಸ್ಥಳ ವಲಯದ ಭಜನಾ ಮಂಡಳಿಯ ಪರಿಷತ್ ನ ಸಭೆ

Suddi Udaya

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಆತ್ಮಹತ್ಯೆ ಪ್ರಕರಣ: ಆರೋಪಿ ಪ್ರೋಫೆಸರ್ ಬಂಧನ; ಮೃತದೇಹ ದೆಹಲಿಗೆ ಆಗಮನ

Suddi Udaya

ಸಿಪಿಐಎಂ ಪಕ್ಷದ ಸಕ್ರಿಯ ಸದಸ್ಯ ಪದ್ಮುಂಜ ನಿವಾಸಿ ಅಣ್ಣು ಸಿ. ನಿಧನ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ

Suddi Udaya
error: Content is protected !!