ಉಜಿರೆ: ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಸಾನಿಧ್ಯ ಕ್ರಿಸ್ಮಸ್ ಸಂಭ್ರಮವು ಡಿ. 21ರಂದು ನಡೆಯಿತು.
ಬೆಳ್ತಂಗಡಿ ಧರ್ಮ ಪ್ರಾಂತ್ಯ ಅತೀ. ವಂ. ಅಬ್ರಹಾಂ ಪಟ್ಟೆರಿಲ್ ಆಶೀರ್ವಚನ ಮತ್ತು ಕ್ರಿಸ್ಮ ಸಂದೇಶ ನೀಡಿದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರರು ಶರತ್ ಕಷ್ಣ ಪಡುವೆಟ್ನಾಯ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬಳಂಜ ಧರ್ಮ ಗುರುಗಳಾದ ಬಹು| ಜಮೀರ್ ಸ ಅದಿ ವಾಲ್ ಫಾಝಿಲ್, ಗೌರವ ಅತಿಥಿಗಳಾದ
ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಜೆಸಿಸ್ ಅಧ್ಯಕ್ಷ ವಾಟರ್ ಸೀಕ್ವೆರಾ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸುಬ್ಬಾಪುರ್ ಮಠ ಸ್ಯೆನಿಕ ಶಿವಕುಮಾರು ಉ ಪಸ್ಥಿತರಿದ್ದರು.
ಕೇಕ್ ಕತ್ತರಿಸಿ ಕ್ರಿಸ್ಮಸ್ ಆಚರಿಸಲಾಯಿತು. ಬಂದಂತಹ ಅತಿಥಿ ಗಣ್ಯರನ್ನು ಕಾರ್ಯಕ್ರಮದ ಆಯೋಜಕರಾದ ಪ್ರೇಮ್ ರಾಜ್ ರೋಷನ್ ಸಿಕ್ವೆರಾ ಸ್ವಾಗತಿಸಿ ಅಭಿಲಾಶ್ ಕಾರ್ಯಕ್ರಮ ನಿರೂಪಿಸಿ ಗೀತಾ ಧನ್ಯವಾದವಿತ್ತರು