24.7 C
ಪುತ್ತೂರು, ಬೆಳ್ತಂಗಡಿ
May 17, 2025
ರಾಜಕೀಯ

ಸರ್ವಾಧಿಕಾರಿ, ದ್ವೇಷದ ರಾಜಕಾರಣದ ಮೂಲಕ ಕೆಟ್ಟ ಪರಂಪರೆಗೆ ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ನಾಂದಿ ಹಾಡಿದೆ : ಅಧಿವೇಶನ ನಾಮ್ ಕೇ ವಾಸ್ತೆ ಪತ್ರಿಕಾಗೋಷ್ಠಿಯಲ್ಲಿ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಈ ಬಾರಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ನಾಮ್ ಕೇ ವಾಸ್ತೆಯಾಗಿದೆ. ನಾನಾ ಕಾರಣಗಳಿಂದ ಅಧಿವೇಶನದಲ್ಲಿ ಮೂರು ದಿನ ನಷ್ಟವಾಗಿದ್ದು ಅಧಿವೇಶನ ಮುಂದುವರಿಸುವಂತೆ ಪ್ರತಿಪಕ್ಷಗಳ ಕೋರಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ” ಎಂದು ಎಂ ಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಶನಿವಾರ ಬೆಳ್ತಂಗಡಿಯ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
“ಬಹುಮತದ ಅಹಂಕಾರದಿಂದ ತಾವು ಮಾಡಿದ್ದು ನಡೆಯುತ್ತದೆ ಎಂಬ ನಡವಳಿಕೆಯುಳ್ಳ ಕಾಂಗ್ರೆಸ್, ಅಧಿವೇಶನದ ಪ್ರತಿ ಹಂತದಲ್ಲೂ ಗೊಂದಲ ನಡೆಸಿದೆ. ಸರ್ವಾಧಿಕಾರಿ, ದ್ವೇಷದ ರಾಜಕಾರಣದ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ. ಉತ್ತರ ಕೊಡಬೇಕಾದ ಸರಕಾರ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಿರುವುದು ವಿಪರ್ಯಾಸ” ಎಂದು ಹೇಳಿದರು

“ರಾಜ್ಯ ಸರಕಾರದಿಂದ ಅಭಿವೃದ್ಧಿ ಕಾರ್ಯ, ಶಂಕುಸ್ಥಾಪನೆ ಸ್ಥಗಿತಗೊಂಡಿದ್ದು ಇದನ್ನು ಶಾಸಕರು ಪ್ರಶ್ನಿಸಿದರೆ ಸರಕಾರದ ಬಳಿ ಸಮರ್ಪಕ ಉತ್ತರವಿಲ್ಲ. ಕುಮ್ಕಿ ಭೂಮಿಯಲ್ಲಿ ಕೃಷಿ ಮಾಡಿ ಮಾಲೀಕತ್ವಕ್ಕಾಗಿ ಕಾಯುತ್ತಿರುವ ಕೃಷಿಕರ ಕುರಿತು ನಿರ್ಲಕ್ಷ ತೋರಲಾಗುತ್ತಿದೆ. ದಕ ಜಿಲ್ಲೆಯ ಸಮಸ್ಯೆಗಳಿಗೆ ಸರಕಾರ ಉದಾಸೀನದ ಪ್ರವೃತ್ತಿ ಮುಂದುವರಿಸಿದೆ ಸದನದಲ್ಲಿ ತಾನು ಕೇಳಿದ 44 ಪ್ರಶ್ನೆಗಳಲ್ಲಿ ಕೇವಲ 13 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗಿದೆ” ಎಂದು ದೂರಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆಯ ವೇಗದಲ್ಲಿ ಸಾಮಾನ್ಯ ಸದಸ್ಯರಂತೆ ವರ್ತಿಸಿದ್ದಾರೆ.ರಾಜಕೀಯ ಚರ್ಚೆಯನ್ನು ಅವರು ವೈಯಕ್ತಿಕ ನೆಲೆಗೆ ತಂದರು. ಸಾಮಾನ್ಯ ನಿಯಮಗಳನ್ನು ಪಾಲಿಸದೆ ಸಿ.ಟಿ. ರವಿ ಅವರನ್ನು ಬಂಧಿಸಿರುವುದು ಖಂಡನೀಯ.ಈ ಘಟನೆಯ ಒಟ್ಟು ಉದ್ದೇಶ ಪ್ರತಿಪಕ್ಷಗಳ ಧ್ವನಿಯನ್ನು ತಗ್ಗಿಸುವುದು ಆಗಿತ್ತು.ಆದರೆ ಪ್ರತಿ ಪಕ್ಷಗಳು ಇದಕ್ಕೆ ಬೆದರುವುದಿಲ್ಲ ಎಂದು ಹೇಳಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಪಾರೆಂಕಿ ಸ್ವಾಗತಿಸಿದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ.ಗ ಣೇಶ ಗೌಡ ಉಪಸ್ಥಿತರಿದ್ದರು.

Related posts

ಪುತ್ತೂರು ಬಿಜೆಪಿ ಅಭ್ಯರ್ಥಿ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಆರಿಕೋಡಿ ಕ್ಷೇತ್ರಕ್ಕೆ ಭೇಟಿ

Suddi Udaya

ವಿಧಾನಪರಿಷತ್ ಉಪ ಚುನಾವಣೆಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಆಯ್ಕೆ

Suddi Udaya

ಬೆಳ್ತಂಗಡಿ: ವಿಧಾನ ಪರಿಷತ್ ಉಪಚುನಾವಣೆ, ಬೆಳ್ತಂಗಡಿಯಲ್ಲಿ 676 ಮತದಾರರು ಬೆಳ್ತಂಗಡಿಯ 49 ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಪತ್ರಿಕಾಗೋಷ್ಠಿಯಲ್ಲಿ ತಹಿಶೀಲ್ದಾರ್ ಪೃಥ್ವಿ ಸಾನಿಕಾಮ್ ಮಾಹಿತಿ

Suddi Udaya

ಡಾ. ಮನಮೋಹನ್ ಸಿಂಗ್ ಅವರ ಸಾಧನೆ, ಕೊಡುಗೆಗಳು ದೇಶಕ್ಕೆ ಎಂದಿಗೂ ಅಜರಾಮರ: ರಕ್ಷಿತ್ ಶಿವರಾಂ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya
error: Content is protected !!