ಬೆಳ್ತಂಗಡಿ: ಪಡ್ಡಂದಡ್ಕದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರೇತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿಗೊಂಡ ತಿರುಮಲೇಶ್ವರ ಭಟ್ ರವರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ನೆರಿಯ ಗ್ರಾಮದ ಬಯಲು ಹಾಗೂ ಕರಾಯ ಶಾಲೆಯಲ್ಲಿ ಸಹಶಿಕ್ಷಕರಾಗಿ, ತಣ್ಣೀರುಪಂತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಒಟ್ಟು 39 ವರ್ಷ ಸೇವೆ ಸಲ್ಲಿಸಿರುತ್ತಾರೆ.
ಇವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಮಾಸ್ಟರ್‍ಸ್ ಎಥ್ಲೆಟಿಕ್ಸ್ ಎಸೋಸಿಯೇಶನ್ ನವರು ಏರ್ಪಡಿಸಿ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಪ್ರಶಸ್ತಿ ಬಂದಿರುವುದನ್ನು ಗುರುತಿಸಿ ಬೆಂಗಳೂರಿನಲ್ಲಿ ಡಿ.28 ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ ಪಡೆಯಲಿದ್ದಾರೆ.