ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಇದರ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿದ್ಯಾ ಎಮ್ಎಚ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪಂಚಾಯತ್ ಅಧ್ಯಕ್ಷರು ದೀಪ ಪ್ರಜ್ವಲಿಸುವ ಮೂಲಕ ಸಭೆಗೆ ಚಾಲನೆಯನ್ನು ನೀಡಿದರು. ಉದ್ಘಾಟಕರ ಮಾತಿನೊಂದಿಗೆ ಆರಂಭಗೊಂಡ ಸಭೆಯ ವರದಿಯನ್ನು ಕಾರ್ಯದರ್ಶಿ ಅನಿತಾ ಫೆರ್ನಾಂಡಿಸ್ ರವರು ಮಂಡಿಸಿದರು.
ವಲಯ ಮೇಲ್ವಿಚಾರಕಿ ವೀಣಾ ರವರು ಒಕ್ಕೂಟವು ಹೇಗೆ ಇರಬೇಕು, ಒಕ್ಕೂಟದಿಂದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನಗಳಿವೆ, ಬ್ಯಾಂಕಿನಲ್ಲಿ ಯಾವ ತರದ ಸಾಲ ಸೌಲಭ್ಯಗಳಿವೆ, ಸಂಘದ ಸದಸ್ಯರು ಯಾವೆಲ್ಲ ರೀತಿಯಲ್ಲಿ ಸ್ವ-ಉದ್ಯೋಗವನ್ನು ನಡೆಸಬಹುದೆಂದು ಸವಿಸ್ತಾರವಾಗಿ ವಿವರಿಸಿದ್ದರು.
ನಂತರ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಒಕ್ಕೂಟದ ಸದಸ್ಯತ್ವದಿಂದ ನಿರ್ಗಮಿಸುವ ಸದಸ್ಯರುಗಳಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಒಕ್ಕೂಟದಲ್ಲಿ ಸಿಐಎಫ್ ಸಾಲ ಪಡೆದು ಉತ್ತಮ ಸಾಧಕಿ ಎಂದು ಗುರುತಿಸಿ ಶ್ರೀಮತಿ ಅನಿತಾ ಗೀತಾ ಫೆರ್ನಾಂಡಿಸ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಒಕ್ಕೂಟದ ಎಲ್ ಸಿ ಆರ್ ಪಿ ಶ್ವೇತಾರವರು ತಯಾರಿಸಿದ ಫಿನೈಲ್ ಹಾಗೂ ಶ್ರೀದೇವಿ ಶ್ರೀ ಶಕ್ತಿ ಸಂಘದ ಸದಸ್ಯೆ ಆರತಿರವರು ತಯಾರಿಸಿದ ಫಿನೈಲ್ ಹಾಗೂ ಸೋಪ್ ಆಯಿಲ್ ಅನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು .
ಜಮಾ ಖರ್ಚಿನ ವಿವರವನ್ನು ಬ್ಯಾಂಕ್ ಸಖಿ ಶ್ರೀಮತಿ ಶ್ರೀಕಲ ನೆರವೇರಿಸಿದರು. ಸಿಎ ಆಡಿಟ್ಟು ರಿಪೋರ್ಟ್ ಅನ್ನು ಉಪಾಧ್ಯಕ್ಷೆ ಅಕ್ಷತಾ ಮಂಡಿಸಿದರು. ಕೃಷಿ ಸಖಿ ವಿಜಯ ರವರ ಪ್ರಾರ್ಥಿಸಿ, ಎಲ್ ಸಿ ಆರ್ ಪಿ ಶ್ವೇತ ಸ್ವಾಗತಿಸಿದರು. ಎಂಬಿಕೆ ನಿಶಾಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ ಸಿ ಆರ್ ಪಿ ಪುಷ್ಪಾ ಧನ್ಯವಾದವಿತ್ತರು,